ಕಡಬ: ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಗುಂಡ್ಯ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಿಳಿನೆಲೆ ಗ್ರಾಮದ ಚೇರು ಎಂಬಲ್ಲಿ ಸೋಮವಾರ ಬೆಂಗಳೂರು ಮೂಲದ ಹುಂಡೈ ಐ 20 ಕಾರೊಂದು ಕಿರು ಸೇತುವೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಬೆಂಗಳೂರಿನ ರಾಮನಗರ ನಿವಾಸಿಗಳಾಗಿರುವ ನಾಗೇಶ್(32) ಹಾಗೂ ತೇಜು ಯಾನೇ ತೇಜಸ್ವಿನಿ (14) ಎಂದು
ಗುರುತಿಸಲಾಗಿದೆ.
ಕಾರಿನಲ್ಲಿದ್ದ ಚಾಲಕ ರವಿ(30), ರಜನಿ(24), ರಂಜಿತ್ (24), ಅಚಿಂತ್ಯಾ(6) ಹಾಗೂ ಒಂದು ಸಣ್ಣ ಮಗುವಿಗೆ ಗಾಯಗಳಾಗಿವೆ. ಇವರೆಲ್ಲಾ ಒಂದೇ ಕುಟುಂಬದವರಾಗಿದ್ದು, ಒಟ್ಟು ಏಳು ಜನ ಕಾರಿನಲ್ಲಿ ರಾಮನಗರದಿಂದ ಸುಬ್ರಹ್ಮಣ್ಯಕ್ಕೆ ದೇವರ ದರ್ಶನಕ್ಕೆ ಬಂದಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಿರುಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರ ಗಾಯಗೊಂಡಿದ್ದರು. ಗಂಭೀರ ಗಾಯವಾಗಿದ್ದವರನ್ನು
ಪುತ್ತೂರು ಖಾಸಗಿ ಆಸ್ಪತ್ರೆಗ ಸಾಗಿಸಲಾಗಿತ್ತದರೂ ಒಬ್ಬರು ಪುತ್ತೂರಿನಲ್ಲಿ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಕಡಬ ಪೋಲಿಸರು ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.