Home ಟಾಪ್ ಸುದ್ದಿಗಳು ಕ್ಯಾಂಟರ್​- ಆಟೋ ಡಿಕ್ಕಿ; ಮೂವರು ಸಾವು

ಕ್ಯಾಂಟರ್​- ಆಟೋ ಡಿಕ್ಕಿ; ಮೂವರು ಸಾವು

ಬೆಂಗಳೂರು: ಕ್ಯಾಂಟರ್​ ಹಾಗೂ ಆಟೋ ನಡುವೆ ಭೀಕರ ಅಪಘಾತ ಸಂಭವಿಸಿ ಮೂವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಫುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಗಡಿ ಭಾಗವಾದ ರಂಗನಹಳ್ಳಿ ಗೇಟ್​ ಬಳಿ ನಡೆದಿದೆ.


ಕೊರಟಗೆರೆಯ ಮೀಲಾನಿ(25),  ಜೈರಬಿ(70) ಸ್ಥಳದಲ್ಲೇ ವೃತಪಟ್ಟಿದ್ದು, ಆಟೋ‌ ಚಾಲಕ ಕಲಂದರ್ ಗೌರಿಬಿದನೂರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಗಾಯಗೊಂಡಿರುವ ಅರ್ಪ (5), ಅಸೀತಾ (3) ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗೌರಿಬಿದನೂರು ತಾಲೂಕಿನ  ಅಲಕಾಪುರಕ್ಕೆ ಆಗಮಿಸಿ ಕೆಲಸ ಮುಗಿಸಿಕೊಂಡು ವಾಪಸ್ ಕೊರಟಗೆರೆಗೆ ತೆರಳುವ ವೇಳೆ ಅಪಘಾತವಾಗಿದೆ.


ಘಟನಾ ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ  ಠಾಣೆಯ ಪೊಲೀಸರು ಹಾಗೂ ಗುಡಿಬಂಡೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಲಿಂಗರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Join Whatsapp
Exit mobile version