Home ಟಾಪ್ ಸುದ್ದಿಗಳು ವಾಹನ ಚಲಾಯಿಸುವಾಗ ಹೆಡ್ ಫೋನ್, ಬ್ಲೂ ಟೂತ್ ಬಳಸುವಂತಿಲ್ಲ !

ವಾಹನ ಚಲಾಯಿಸುವಾಗ ಹೆಡ್ ಫೋನ್, ಬ್ಲೂ ಟೂತ್ ಬಳಸುವಂತಿಲ್ಲ !

ಬೆಂಗಳೂರು: ವಾಹನ ಚಲಾಯಿಸುವಾಗ ಹೆಡ್ ಫೋನ್ ಹಾಗೂ ಬ್ಲೂ ಟೂತ್ ಬಳಕೆಯನ್ನು ನಿರ್ಬಂಧಿಸಲಾಗಿದ್ದು, ಈ ನಿಯಮ ಉಲ್ಲಂಘಿಸಿದವರಿಗೆ ಸಂಚಾರ ಪೊಲೀಸರು 1,000 ದಂಡ ವಿಧಿಸಲಿದ್ದಾರೆ.


ಮೋಟಾರು ವಾಹನಗಳ ಕಾಯ್ದೆ ಪ್ರಕಾರ, ವಾಹನ ಚಾಲನೆ ಸಂದರ್ಭದಲ್ಲಿ ಗಮನ ಬೇರೆಡೆ ಸೆಳೆಯುವ ಉಪಕರಣಗಳ ಬಳಕೆಯನ್ನು ನಿರ್ಬಂಧಿಸಲಾಗಿದೆ. ಚಾಲನೆ ವೇಳೆ ಯಾರಾದರೂ ಮೊಬೈಲ್, ಹೆಡ್ ಫೋನ್, ಬ್ಲೂಟೂತ್ ಹಾಗೂ ಇತರೆ ಎಲೆಕ್ಟ್ರಾನಿಕ್ ಉಪಕರಣ ಬಳಸಿದರೆ ದಂಡ ವಿಧಿಸಲಾಗುವುದು. ಈ ಬಗ್ಗೆ ಸಿಬ್ಬಂದಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್. ರವಿಕಾಂತೇಗೌಡ ಹೇಳಿದ್ದಾರೆ.


ಜೇಬಿನಲ್ಲಿ ಮೊಬೈಲ್ ಇಟ್ಟುಕೊಳ್ಳುವ ಬಹುತೇಕರು, ಹೆಡ್ ಫೋನ್ ಹಾಗೂ ಬ್ಲೂಟೂತ್ ಉಪಕರಣ ಬಳಕೆ ಮಾಡುತ್ತಿರುತ್ತಾರೆ. ವಾಹನ ಚಲಾಯಿಸುತ್ತಲೇ ಮೊಬೈಲ್ ನಲ್ಲಿ ಮಾತನಾಡುತ್ತಾರೆ ಹಾಗೂ ಹಾಡು ಕೇಳುತ್ತಾರೆ. ಇಂಥ ವರ್ತನೆಯಿಂದ ಗಮನ ಬೇರೆಡೆ ಹೋಗಿ, ಅಪಘಾತಗಳು ಹೆಚ್ಚುತ್ತವೆ. ಅಮಾಯಕರು ಜೀವ ಕಳೆದುಕೊಳ್ಳುತ್ತಾರೆ ಎಂದು ಹೇಳಿದರು.

Join Whatsapp
Exit mobile version