ಬೆಂಗಳೂರು: ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಮತ್ತೆ ಪ್ರಚೋದನಾಕಾರಿ ಹೇಳಿಕೆ ನೀಡಿದ್ದು, ನಮ್ಮ ಮಹಿಳೆಯರನ್ನು ಅತ್ಯಾಚಾರಕ್ಕೊಳಪಡಿಸುತ್ತಿರುವಾಗ, ಗೋಮಾತೆಯನ್ನು ಕಳ್ಳತನ ಮಾಡಿ ಹತ್ಯೆ ಮಾಡುತ್ತಿರುವಾಗ, ನಮ್ಮ ಯುವಕರನ್ನು ಹಲ್ಲೆ ಮಾಡಿ ಹತ್ಯೆ ಮಾಡುತ್ತಿರುವಾಗ ನಾವು ಕೈಗಟ್ಟಿ ಕೂರಬೇಕೆ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಈ ಹಿಂದಿನಂತೆ ಸಣ್ಣ ಶಕ್ತಿಯಲ್ಲ, ಬದಲಾಗಿ ಬಿಜೆಪಿ ಗ್ರಾಮ ಪಂಚಾಯತ್ ನಿಂದ ಹಿಡಿದು ಪ್ರಧಾನಮಂತ್ರಿ ಕಚೇರಿ ವರೆಗೆ ಜನಪ್ರತಿನಿಧಿಗಳನ್ನು ಹೊಂದಿರುವ ಒಂದು ಬಲಿಷ್ಠ ಪಕ್ಷ. ಈಗ ನಮ್ಮ ಕಡೆಯವರು ಕೊಲ್ಲಲ್ಪಟ್ಟಾಗ ಮೌನವಾಗಿರಲು ಸಾಧ್ಯವಿಲ್ಲವೆಂದು ಈಶ್ವರಪ್ಪ ಹೇಳಿದರು.
ಭಾನುವಾರ ಶಿವಮೊಗ್ಗದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಈ ಹಿಂದೆ ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿದಾಗ ಆರೆಸ್ಸೆಸ್ ಮತ್ತು ಬಿಜೆಪಿ ಉನ್ನತ ನಾಯಕರು ನಮಗೆ ಪ್ರತಿಕ್ರಿಯಿಸದಂತೆ ಕೇಳುತ್ತಿದ್ದರು. ಆದರೆ ಈಗ ನಮ್ಮನ್ನು ಗುರಿಯಾಗಿಸುವವರಿಗೆ ಬ್ರಹ್ಮ ಬಂದು ಸಲಹೆ ನೀಡಿದರೂ ಇನ್ನು ಮುಂದಕ್ಕೆ ಮೌನವಹಿಸಲು ಸಾಧ್ಯವಿಲ್ಲವೆಂದು ಹೇಳಿದ್ದರು. ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿಯಾದರೆ ಸೂಕ್ತ ಪ್ರತ್ಯುತ್ತರ ನೀಡುವಂತೆ ಬಿಜೆಪಿ ಕಾರ್ಯಕರ್ತರಿಗೆ ಈಶ್ವರಪ್ಪ ಕರೆ ನೀಡಿದರು.
ನಮ್ಮ ಮಹಿಳೆಯರು, ಹಸುಗಳನ್ನು ಗುರಿಯಾಗಿಸಿದರೆ ಸುಮ್ಮನಿರಲು ಸಾಧ್ಯವಿಲ್ಲ: ಮತ್ತೆ ಪ್ರಚೋದನಾಕಾರಿ ಹೇಳಿಕೆ ನೀಡಿದ ಈಶ್ವರಪ್ಪ
Prasthutha|