ಕೋವಿಡ್ ಕೇಂದ್ರದಲ್ಲಿ ಗಾಂಜಾ ಮತ್ತು ಮದ್ಯ ವಿತರಣೆ | ವೀಡಿಯೊ ವೈರಲ್

Prasthutha|

ಮುಂಬೈ: ಮಹಾರಾಷ್ಟ್ರದ ಕೋವಿಡ್ ಕೇಂದ್ರದಲ್ಲಿ ಗಾಂಜಾ ಮತ್ತು ಮದ್ಯವನ್ನು ವಿತರಿಸುವ ವಿಡಿಯೋ ವೈರಲ್ ಆಗಿದೆ. ಮಹಾರಾಷ್ಟ್ರದಲ್ಲಿ ವ್ಯಾಪಕವಾಗಿ ಕೋವಿಡ್ ಹರಡುತ್ತಿದ್ದಂತೆ ಕೋವಿಡ್ ಕೇಂದ್ರದ ಸ್ಥಿತಿಯನ್ನು ಉಲ್ಲೇಖಿಸಿ ಈ ವಿಡಿಯೋವನ್ನು ಟೈಮ್ಸ್ ಆಫ್ ಇಂಡಿಯಾ ಬಿಡುಗಡೆ ಮಾಡಿದೆ. ಕೋವಿಡ್ ಕೇಂದ್ರದಲ್ಲಿ ಸಿಬ್ಬಂದಿಗಳು ಆಲ್ಕೊಹಾಲ್ ವಿತರಿಸುತ್ತಿರುವುದು ಈ ವೀಡಿಯೊ ತೋರಿಸುತ್ತದೆ. ಮುಂಬೈ ಕಲ್ಯಾಣ್‌ನ ಸಾಲ್ವಾರಾಂ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿರುವ ಕೋವಿಡ್ ಕೇಂದ್ರದಲ್ಲಿ ಈ ಘಟನೆ ನಡೆದಿದೆ.

- Advertisement -

ಕೋವಿಡ್ ಕೇಂದ್ರದ ಸಿಬ್ಬಂದಿ ಸೇರಿದಂತೆ ನಾಲ್ಕು ಜನರು  ಗಾಂಜಾ ಮತ್ತು ಮಧ್ಯ ಸೇವನೆ ಮಾಡುತ್ತಿರುವುದು ಈ ವೀಡಿಯೊ ಸ್ಪಷ್ಟವಾಗಿ ತೋರಿಸುತ್ತದೆ.

Join Whatsapp