ಟೊರೆಂಟೊ: ಕೆನಡಾದ ಸಂಸತ್ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ನೇತೃತ್ವದ ಲಿಬರಲ್ ಪಕ್ಷ ಗೆಲುವು ಪಡೆದಿದ್ದು. ಆದರೆ ಸರ್ಕಾರ ರಚನೆಗೆ ಅಗತ್ಯವಾದ ಬಹುಮತವನ್ನು ಪಡೆಯವಲ್ಲಿ ವಿಫಲವಾಗಿದೆ.
ಟ್ರುಡೊ ಅವರ ಲಿಬರಲ್ ಪಕ್ಷ 156 ಸ್ಥಾನಗಳಲ್ಲಿ ಆಯ್ಕೆಯಾಗಿದೆ ಅಥವಾ ಮುನ್ನಡೆ ಸಾಧಿಸಿದೆ. ಹೌಸ್ ಆಫ್ ಕಾಮನ್ಸ್ ನಲ್ಲಿ ಬಹುಮತ ಸಾಬೀತಿಗೆ 170 ಸ್ಥಾನಗಳ ಅಗತ್ಯವಿದ್ದು, ಸದ್ಯ ಲಿಬರಲ್ ಪಕ್ಷಕ್ಕೆ 14 ಸ್ಥಾನಗಳ ಕೊರತೆ ಇದೆ.
ಕನ್ಸರ್ವೇಟಿವ್ ಪಕ್ಷದವರು 121 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ ಅಥವಾ ಗೆದ್ದಿದ್ದಾರೆ. ಈ ಪಕ್ಷ ಕೂಡ 2019ರ ಚುನಾವಣೆಯಲ್ಲಿ ಇಷ್ಟೇ ಸ್ಥಾನಗಳನ್ನು ಪಡೆದಿತ್ತು. ಎಡಪಂಥೀಯ ನ್ಯೂ ಡೆಮಾಕ್ರೆಟ್ ಪಕ್ಷ 27 ಕ್ಷೇತ್ರಗಳಲ್ಲಿ ಮುನ್ನಡೆ ಅಥವಾ ಚುನಾಯಿತರಾಗಿದ್ದಾರೆ.