Home ಟಾಪ್ ಸುದ್ದಿಗಳು ಕೋವಿಡ್ ನಿರ್ವಹಣೆಯಲ್ಲಿ ಕೇರಳ ಸರ್ಕಾರ ವಿಫಲವಾಗಿದೆಯೆಂದು ಬಿಂಬಿಸುತ್ತಿರುವುದು ದುರದೃಷ್ಟಕರ : ಆರೋಗ್ಯ ಸಚಿವೆ ಆರೋಪ

ಕೋವಿಡ್ ನಿರ್ವಹಣೆಯಲ್ಲಿ ಕೇರಳ ಸರ್ಕಾರ ವಿಫಲವಾಗಿದೆಯೆಂದು ಬಿಂಬಿಸುತ್ತಿರುವುದು ದುರದೃಷ್ಟಕರ : ಆರೋಗ್ಯ ಸಚಿವೆ ಆರೋಪ

ತಿರುವನಂತಪುರಂ ಜುಲೈ 30: ಕೋವಿಡ್ 19 ನಿರ್ವಹಣೆಯಲ್ಲಿ ಕೇರಳ ಸರ್ಕಾರ ವಿಫಲವಾಗಿದೆಯೆಂದು ಬಿಂಬಿಸಿ ಅಭಿಯಾನ ನಡೆಸುತ್ತಿರುವುದು ದುರದೃಷ್ಟಕರವೆಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಗುರುವಾರ ಆರೋಪಿಸಿದ್ದಾರೆ. ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಬಹಳಷ್ಟು ಶ್ರಮ ವಹಿಸುತ್ತಿದೆಯೆಂದು ಹೇಳಿದ್ದಾರೆ.


ಅಧಿಕ ಜನಸಂಖ್ಯಾ ಸಾಂದ್ರತೆ ಹೊಂದಿರುವ ಕೇರಳದಲ್ಲಿ ಲಾಕ್ ಡೌನ್ ಸಡಿಲಿಕೆಯ ಸಂದರ್ಭದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಶೇಕಡಾ 12 ರಷ್ಟಿದೆ. ಕೊರೋನಾ ನಿಯಂತ್ರಣಕ್ಕೆ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿರುವ ಕೇರಳ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸುವುದು ದುರದೃಷ್ಟಕರ. ವಾಸ್ತವದಲ್ಲಿ ಕೇರಳ ರಾಜ್ಯ ಉತ್ತಮ ನಿರ್ವಹಣೆ ತೋರುತ್ತಿದೆಯೆಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೇರಳದಲ್ಲಿ ಕೊರೋನ ರೂಪಾಂತರಿತ ಡೆಲ್ಟಾ ವೈರಸ್ ವ್ಯಾಪಕವಾಗಿರುವುದು ಆತಂಕಕ್ಕೆ ಎಡೆಮಾಡಿದೆ. ರಾಜ್ಯದಲ್ಲಿ ಕೋವಿಡ್ 19 ಪರೀಕ್ಷೆಗಳನ್ನು ವ್ಯಾಪಕವಾಗಿ ನಡೆಸಲು ಯೋಜನೆ ಹಾಕಿಕೊಂಡಿದೆ. ಬುಧವಾರ 1.96 ಲಕ್ಷ ಮತ್ತು ಗುರುವಾರ 1.63 ಲಕ್ಷ ಲಸಿಕೆಯನ್ನು ಹಾಕಿಸಲಾಗಿದೆಯೆಂದು ಅಂಕಿಅಂಶಗಳೊಂದಿಗೆ ಅವರು ವಿವರಣೆ ನೀಡಿದರು. ಅದೇ ರೀತಿ ಪಾಸಿಟಿವ್ ರೋಗಿಯ ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ಸಂಪರ್ಕದವರನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಯಾವುದೇ ಸೋಂಕಿತರು ಆಕ್ಸಿಜನ್ ಅಥವಾ ಬೆಡ್ ಕೊರತೆಯಿಂದ ಮರಣ ಹೊಂದಿಲ್ಲ. ಗುರುವಾರ ಸತತ ಮೂರನೇ ದಿನಕ್ಕೆ ರಾಜ್ಯದಲ್ಲಿ 22,000 ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾಗುತ್ತಿದೆ.

Join Whatsapp
Exit mobile version