ಬೆಂಗಳೂರು: ಕನ್ನಡಪರ ಸಂಘಟನೆ, ರೈತರು ಹಾಗೂ ಹೋರಾಟಗಾರರ ಮೇಲಿನ ವಿಚಾರಣೆ ಹಂತದಲ್ಲಿರುವ ಕೇಸ್ ಗಳನ್ನು ಹಿಂಪಡೆಯಲು ಕರ್ನಾಟಕ ಸಚಿವ ಸಂಪುಟ ನಿರ್ಧರಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೇಸ್ಗಳನ್ನು ಹಿಂಪಡೆಯುವ ಪ್ರಸ್ತಾವಕ್ಕೆ ಅನುಮೋದನೆ ನೀಡಲಾಗಿದೆ ಎಂದು ಕಾನೂನು ಸಚಿವ ಹೆಚ್ ಕೆ ಪಾಟೀಲ್ ತಿಳಿಸಿದರು. ಕೇಸ್ ಗಳನ್ನು ಹಿಂಪಡೆಯಲು ಸಂಪುಟ ಉಪಸಮಿತಿ ರಚನೆ ಮಾಡಲು ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.