Home ಟಾಪ್ ಸುದ್ದಿಗಳು ಹುಡುಗಿಯರ ಮದುವೆ ವಯಸ್ಸು 18 ರಿಂದ 21 ಕ್ಕೆ ಏರಿಸಲು ಸಂಪುಟ ಅನುಮೋದನೆ

ಹುಡುಗಿಯರ ಮದುವೆ ವಯಸ್ಸು 18 ರಿಂದ 21 ಕ್ಕೆ ಏರಿಸಲು ಸಂಪುಟ ಅನುಮೋದನೆ

ನವದೆಹಲಿ: ಹುಡುಗಿಯರ  ಮದುವೆ ವಯಸ್ಸನ್ನು 18 ರಿಂದ 21 ಕ್ಕೆ ಹೆಚ್ಚಿಸುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಕಳೆದ ವರ್ಷದ ಸ್ವಾತಂತ್ರ್ಯೋತ್ಸವ ಭಾಷಣದ ವೇಳೆಪ್ರಸ್ತಾಪಿಸಿದ ಪ್ರಧಾನಿ ಮೋದಿ, “ಸರ್ಕಾರವು ಹೆಣ್ಣುಮಕ್ಕಳ ಆರೋಗ್ಯದ ಬಗ್ಗೆ ನಿರಂತರವಾಗಿ ಕಾಳಜಿ ವಹಿಸುತ್ತದೆ. ಹೆಣ್ಣು ಮಕ್ಕಳನ್ನು ಅಪೌಷ್ಟಿಕತೆಯಿಂದ ರಕ್ಷಿಸಲು, ಅವರು ಸರಿಯಾದ ವಯಸ್ಸಿನಲ್ಲಿ ಮದುವೆಯಾಗುವುದು ಅವಶ್ಯಕ” ಎಂದು ಪ್ರಧಾನಿ ಹೇಳಿದ್ದರು.

ಪ್ರಸ್ತುತ, ಪುರುಷರ ಮದುವೆಯ ಕನಿಷ್ಠ ವಯಸ್ಸು 21 ಆದರೆ ಮಹಿಳೆಯರಿಗೆ 18 ಆಗಿದೆ. ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಬಾಲ್ಯವಿವಾಹ ನಿಷೇಧ ಕಾಯಿದೆ, ವಿಶೇಷ ವಿವಾಹ ಕಾಯಿದೆ ಮತ್ತು ಹಿಂದೂ ವಿವಾಹ ಕಾಯಿದೆಗಳಲ್ಲಿ ಬದಲಾವಣೆಗಳನ್ನು ಮಾಡಲು ಸರ್ಕಾರ ಯೋಜಿಸಿದೆ ಎಂದು ಹೇಳಲಾಗಿದೆ. 

ಈ ಪ್ರಸ್ತಾಪವನ್ನು ಜಯಾ ಜೇಟ್ಲಿ ನೇತೃತ್ವದ ನೀತಿ ಆಯೋಗದ ಕಾರ್ಯಪಡೆಯು ಬೆಂಬಲಿಸಿದ್ದು, ಸರ್ಕಾರದ ಉನ್ನತ ತಜ್ಞ ವಿಕೆ ಪಾಲ್, ಆರೋಗ್ಯ ಸಚಿವಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಕಾನೂನು ಸಚಿವಾಲಯದ ಹಿರಿಯ ಅಧಿಕಾರಿಗಳು ಕಳೆದ ವರ್ಷ ಜೂನ್‌ನಲ್ಲಿ ರಚಿಸಲಾದ ಕಾರ್ಯಪಡೆಯ ಸದಸ್ಯರಾಗಿದ್ದರು.

Join Whatsapp
Exit mobile version