Home ಟಾಪ್ ಸುದ್ದಿಗಳು CAA ಯನ್ನು ಎಂದಿಗೂ ಹಿಂದೆಗೆದುಕೊಳ್ಳುವುದಿಲ್ಲ: ಅಮಿತ್ ಶಾ

CAA ಯನ್ನು ಎಂದಿಗೂ ಹಿಂದೆಗೆದುಕೊಳ್ಳುವುದಿಲ್ಲ: ಅಮಿತ್ ಶಾ

ನವದೆಹಲಿ: ಸಿಎಎಯನ್ನು ಎಂದಿಗೂ ಹಿಂದೆಗೆದುಕೊಳ್ಳುವುದಿಲ್ಲ ಮತ್ತು ಸರ್ಕಾರ ಎಂದಿಗೂ ಅದರೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಮಾಧ್ಯಮವೊಂದರ ಜೊತೆಗೆ ಮಾತನಾಡುತ್ತಾ ಅವರು, ನಮ್ಮ ದೇಶದಲ್ಲಿ ಭಾರತೀಯ ಪೌರತ್ವವನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಸಾರ್ವಭೌಮ ಹಕ್ಕು. ನಾವು ರಾಜಿ ಮಾಡಿಕೊಳ್ಳುವುದಿಲ್ಲ ಮತ್ತು ಸಿಎಎಯನ್ನು ಎಂದಿಗೂ ಹಿಂದೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ.

ಸಿಎಎಯನ್ನು ಬಿಜೆಪಿ ಪಕ್ಷ ತಂದಿದೆ. ಅದನ್ನು ರದ್ದುಪಡಿಸುವುದು ಅಸಾಧ್ಯ. ನಾವು ಇಡೀ ರಾಷ್ಟ್ರದಲ್ಲಿ ಅದರ ಬಗ್ಗೆ ಜಾಗೃತಿ ಮೂಡಿಸುತ್ತೇವೆ, ಇದರಿಂದ ಅದನ್ನು ರದ್ದುಗೊಳಿಸಲು ಬಯಸುವವರಿಗೆ ಸ್ಥಾನ ಸಿಗುವುದಿಲ್ಲ ಎಂದು ಶಾ ಹೇಳಿದರು.

Join Whatsapp
Exit mobile version