Home ಟಾಪ್ ಸುದ್ದಿಗಳು ದೇಶದಲ್ಲಿ ಶಾಂತಿ ಕದಲಿಸಲು ಸಿಎಎ ಜಾರಿಗೆ ತಂದಿದ್ದಾರೆ: ಡಿಕೆಶಿ

ದೇಶದಲ್ಲಿ ಶಾಂತಿ ಕದಲಿಸಲು ಸಿಎಎ ಜಾರಿಗೆ ತಂದಿದ್ದಾರೆ: ಡಿಕೆಶಿ

ಬೆಂಗಳೂರು: ದೇಶದಲ್ಲಿ ಶಾಂತಿ ಕದಲಿಸಬೇಕು ಎಂದು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೆ ತರುವ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.

ಸಿಎಎ ಜಾರಿಗೆ ತಂದಿರುವ ಕುರಿತು ಮಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸರ್ಕಾರ ಮೂರುವರೆ ವರ್ಷ ನಿದ್ರೆ ಮಾಡುತ್ತಿತ್ತು. ಈಗ ಎಲೆಕ್ಷನ್ ಬಂದಿದೆ, ಈ ಅಸ್ಸಾಂ ಪಶ್ಚಿಮ ಬಂಗಾಳದಲ್ಲಿ ಜಾತಿ ಹೋರಾಟ ನಡೆಯಿತು. ಈ ದೇಶದಲ್ಲಿ ಶಾಂತಿ ಕದಲಿಸಬೇಕು ಎಂದು ಈ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಕೇಂದ್ರದ ವಿರುದ್ಧ ಕಿಡಿಕಾರಿದರು.


ಎಲ್ಲಾ ಜಾತಿ ಧರ್ಮ ರಕ್ಷಣೆ ಮಾಡುವುದು ನಮ್ಮ ಪಕ್ಷದ ಕರ್ತವ್ಯ. ಹೀಗಾಗಿ ಸಿಎಎ (CAA) ಜಾರಿಗೆ ತಂದಿರುವ ನಿರ್ಧಾರವನ್ನು ಖಂಡಿಸುವುದಾಗಿ ಡಿಕೆಶಿ ಹೇಳಿದರು.

Join Whatsapp
Exit mobile version