ನವದೆಹಲಿ : ಸಿಎಎ ವಿರೋಧಿ ಹೋರಾಟಗಾರ್ತಿ, ಸಾಮಾಜಿಕ ಕಾರ್ಯಕರ್ತೆ ಇಶ್ರತ್ ಜಹಾನ್ ಗೆ ಜೈಲಿನಲ್ಲಿ ಥಳಿಸಿ, ಬಟ್ಟೆ ಹರಿದ ಘಟನೆ ನಡೆದಿದೆ. ನ್ಯಾಯಾಲಯಕ್ಕೆ ಈ ಬಗ್ಗೆ ಮಾಹಿತಿ ನೀಡಿದ ಇಶ್ರತ್ ಜಹಾನ್, ತನಗೆ ಮಾಂಡೋಲಿ ಜೈಲಿನಲ್ಲಿ ಕೈದಿಗಳಿಂದ ಥಳಿಸಲಾಗಿದೆ ಮತ್ತು ಕಿರುಕುಳ ನೀಡಲಾಗುತ್ತಿದೆ ಎಂದು ಆಪಾದಿಸಿದ್ದಾರೆ.
ಇದು ಎರಡನೇ ಬಾರಿ ಈ ರೀತಿಯಾಗುತ್ತಿದೆ. ತನ್ನ ಬಟ್ಟೆಯನ್ನು ಹರಿಯಲಾಗಿದೆ, ತಲೆಯನ್ನು ಹಲವು ಬಾರಿ ಗೋಡೆಗೆ ಜಜ್ಜಲಾಗಿದೆ. ಯಾವಾಗಲೂ ತನಗೆ ಬೆದರಿಕೆಯೊಡ್ಡಲಾಗುತ್ತದೆ ಮತ್ತು ನಿಂದಿಸಲಾಗುತ್ತದೆ. ಆಕೆಯನ್ನು ಶಾಂತಿಯುತವಾಗಿ ಜೀವಿಸಲು ಬಿಡಿ ಎಂದು ಆಕೆಯ ಪತಿ ಫರ್ಹಾನ್ ಹಾಶ್ಮಿ ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿ ಮುಸ್ಲಿಮ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಲ್ ಇಂಡಿಯಾ ಮುಸ್ಲಿಮ್ ಮಜ್ಲಿಸ್ ಮುಶಾವರತ್ ಅಧ್ಯಕ್ಷ ನವೇದ್ ಹಾಮಿದ್ ಘಟನೆಯ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.