Home ಟಾಪ್ ಸುದ್ದಿಗಳು 7 ವಿಧಾನಸಭಾ ಸ್ಥಾನಗಳಿಗೆ ಸೆ.5ಕ್ಕೆ ಉಪ ಚುನಾವಣೆ

7 ವಿಧಾನಸಭಾ ಸ್ಥಾನಗಳಿಗೆ ಸೆ.5ಕ್ಕೆ ಉಪ ಚುನಾವಣೆ

ಹೊಸದಿಲ್ಲಿ: ಇತ್ತೀಚೆಗಷ್ಟೇ ನಿಧನ ಹೊಂದಿದ ಕಾಂಗ್ರೆಸ್‌ನ ಹಿರಿಯ ನಾಯಕ, ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್‌ ಚಾಂಡಿ ಅವರ ಪಥುಪಲ್ಲಿ ಕ್ಷೇತ್ರ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿನ ಒಟ್ಟು 7 ವಿಧಾನಸಭೆ ಸ್ಥಾನಗಳಿಗೆ ಸೆಪ್ಟಂಬರ್‌ 5 ರಂದು ಉಪ ಚುನಾವಣೆ ನಡೆಸಲಾಗುವುದು. ಸೆ.8ಕ್ಕೆ ಈ ಎಲ್ಲ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ ಎಂದು ಚುನಾವಣೆ ಆಯೋಗ ಮಂಗಳವಾರ ತಿಳಿಸಿದೆ.

ತ್ರಿಪುರದ 2 ಸ್ಥಾನ ಹಾಗೂ ಕೇರಳ, ಝಾರ್ಖಂಡ್‌, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ತಲಾ 1 ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ.

ತ್ರಿಪುರಾದಲ್ಲಿ ಶಾಸಕ ಸ್ಯಾಮುಯಲ್‌ ಅವರ ನಿಧನ ಹಾಗೂ ಶಾಸಕಿ ಪ್ರತಿಮಾ ಭೌಮಿಕ್‌ ಅವರ ರಾಜೀನಾಮೆ ಯಿಂದಾಗಿ ಬಾಕ್ಸಾನಗರ, ಧನ್ಪುರ ಕ್ಷೇತ್ರಗಳಿಗೆ ಮರುಚುನಾವಣೆ ನಡೆಸಲಾಗುತ್ತಿದೆ. ಇನ್ನು ಕೇರಳ, ಉತ್ತರಾಖಂಡ, ಪ.ಬಂಗಾಳ, ಝಾರ್ಖಂಡ್‌ನ‌ ಒಂದೊಂದು ಕ್ಷೇತ್ರದ ಶಾಸಕರು ನಿಧನರಾಗಿರುವ ಕಾರಣ ಮತ್ತು ಉತ್ತರ ಪ್ರದೇಶದ 1 ಕ್ಷೇತ್ರಕ್ಕೆ ಉಪ ಚುನಾವಣೆ ನಡೆಸಲಾಗುತ್ತಿದೆ.

Join Whatsapp
Exit mobile version