ಹೊಸದಿಲ್ಲಿ: ಗುಜರಾತಿನಲ್ಲಿ ಅಧಿಕಾರ ಗಳಿಸಿ ಬೀಗುತ್ತಿರುವ ಬಿಜೆಪಿಯು ದೇಶದ ವಿವಿಧೆಡೆ ನಡೆದ ಉಪಚುನಾವಣೆಗಳಲ್ಲಿ ಸೋಲನ್ನು ಅನುಭವಿಸಿದೆ.
ಐದು ರಾಜ್ಯಗಳಲ್ಲಿ 1 ಲೋಕಸಭಾ, 6 ವಿಧಾನಸಭೆಗೆ ನಡೆದ ಉಪಚುನಾವಣೆಯಲ್ಲಿ ಬಿಹಾರ, ಉತ್ತರ ಪ್ರದೇಶದ ತಲಾ ಒಂದೊಂದು ಕ್ಷೇತ್ರ ಹೊರತುಪಡಿಸಿ ಇತರೆಡೆ ಬಿಜೆಪಿಯು ಸೋಲನ್ನು ಅನುಭವಿಸಿದೆ.
ಮುಲಾಯಂ ಸಿಂಗ್ ಯಾದವ್ ಸಂಸದರಾಗಿದ್ದ ಉತ್ತರ ಪ್ರದೇಶದ ಮೈನ್‌ಪುರಿ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಡಿಂಪಲ್ ಯಾದವ್ ಅವರು 2,88,461 ದಾಖಲೆ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.
ಛತ್ತೀಸ್‌ಘಡದ ಭಾನುಪ್ರತಾಪ್‌ಪುರ್ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮನೋಜ್ ಮಾಂಡವಿ ಅವರು ಬಿಜೆಪಿಯ ಬ್ರಹ್ಮಾನಂದ ನೇತಮ್ ಅವರ ವಿರುದ್ಧ 21,171 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.
ರಾಜಸ್ಥಾನದ ಸರ್ದಾರ್ ಶಹರ್ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಕುಮಾರ್ ಶರ್ಮಾ ಅವರು ಬಿಜೆಪಿಯ ಅಶೋಕ್ ಕುಮಾರ್ ಅವರ ವಿರುದ್ಧ 25852 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.
ಒಡಿಶಾದ ಪದಂಪುರ್ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜು ಜನತಾ ದಳದ ಅಭ್ಯರ್ಥಿ(ಬಿಜೆಡಿ) ಬರ್ಶಾ ಸಿಂಗ್ ಬರಿಹಾ, ಬಿಜೆಪಿಯ ಪ್ರದೀಪ್ ಪುರೋಹಿತ್ ವಿರುದ್ಧ ಜಯಗಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಕತೌಲಿ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ರಾಷ್ಟ್ರೀಯ ಲೋಕ ದಳ(ಆರ್‍ಎಲ್‌ಡಿ)ದ ಮದನ್ ಬಾಯಿಯ ಅವರು ಬಿಜೆಪಿಯ ರಾಜ್‌ಕುಮಾರಿ ಅವರ ವಿರುದ್ಧ 22,143 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ಐದು ರಾಜ್ಯಗಳಲ್ಲಿ 1 ಲೋಕಸಭಾ, 6 ವಿಧಾನಸಭೆಗೆ ನಡೆದ ಉಪಚುನಾವಣೆಯ ಫಲಿತಾಂಶ
ಮೈನ್‌ಪುರಿ(ಉ.ಪ್ರ ಲೋಕಸಭೆ) ಡಿಂಪಲ್ ಯಾದವ್(ಸಮಾಜವಾದಿ ಪಕ್ಷ)
ಕತೌಲಿ (ಉ.ಪ್ರ ವಿಧಾನ ಸಭೆ) ಮದನ್ ಬಾಯಿ(ಆರ್‍ಎಲ್‌ಡಿ)
ರಾಂಪುರ್(ಉ.ಪ್ರ ವಿಧಾನ ಸಭೆ) ಆಕಾಶ್ ಸಕ್ಸೇನಾ(ಬಿಜೆಪಿ)
ಪದಂಪುರ್ ಕ್ಷೇತ್ರ(ಒಡಿಶಾ) ಬರ್ಶಾ ಸಿಂಗ್ ಬರಿಹಾ(ಬಿಜೆಡಿ)
ಕುರ್ಹಾನಿ(ಬಿಹಾರ ವಿಧಾನಸಭೆ) ಕೇದಾರ್ ಪ್ರಸಾದ್ ಗುಪ್ತಾ(ಬಿಜೆಪಿ)
ಸರ್ದಾರ್ ಶಹರ್ (ರಾಜಸ್ಥಾನ ವಿಧಾನಸಭೆ) ಅನಿಲ್ ಕುಮಾರ್ ಶರ್ಮಾ(ಕಾಂಗ್ರೆಸ್)
ಭಾನುಪ್ರತಾಪ್‌ಪುರ್(ಛತ್ತೀಸ್‌ಘಡ ವಿಧಾನಸಭೆ) ಮನೋಜ್ ಮಾಂಡವಿ(ಕಾಂಗ್ರೆಸ್)