Home ಟಾಪ್ ಸುದ್ದಿಗಳು 13 ಕ್ಷೇತ್ರಗಳಲ್ಲಿ ಉಪ ಚುನಾವಣೆ: 11 ಕ್ಷೇತ್ರಗಳಲ್ಲಿ ‘INDIA’ ಮುನ್ನಡೆ

13 ಕ್ಷೇತ್ರಗಳಲ್ಲಿ ಉಪ ಚುನಾವಣೆ: 11 ಕ್ಷೇತ್ರಗಳಲ್ಲಿ ‘INDIA’ ಮುನ್ನಡೆ

ನವದೆಹಲಿ: ಮಧ್ಯಪ್ರದೇಶ, ತಮಿಳುನಾಡು, ಪಂಜಾಬ್, ಪಶ್ಚಿಮ ಬಂಗಾಳ, ಬಿಹಾರ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದ ಕ್ಷೇತ್ರಗಳು ಸೇರಿದಂತೆ ಒಟ್ಟು 7 ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ.

11 ಕ್ಷೇತ್ರಗಳಲ್ಲಿ ಇಂಡಿಯಾ ಮೈತ್ರಿಕೂಟ ಮುನ್ನಡೆ ಸಾಧಿಸಿದ್ದು, ಆಮ್ ಆದ್ಮಿ ಪಕ್ಷದ ಮೊಹಿಂದರ್ ಭಗತ್ ಜಲಂಧರ್ ಪಂಜಾಬ್​ನ ಪಶ್ಚಿಮದಲ್ಲಿ ಗೆಲುವು ಸಾಧಿಸಿದ್ದಾರೆ.

ಬುಧವಾರ 7 ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆಗೆ ವೋಟಿಂಗ್ ನಡೆದಿತ್ತು. ಇಂದು ಮತ ಎಣಿಕೆ ನಡೆಯುತ್ತಿದ್ದು, ಸದ್ಯದ ಮಟ್ಟಿಗೆ ಇಂಡಿಯಾ ಮೈತ್ರಿಕೂಟ ಮುನ್ನಡೆ ಸಾಧಿಸಿದೆ.

ಲೋಕಸಭಾ ಚುನಾವಣೆಯ ನಂತರ ಮೊದಲ ಬಾರಿಗೆ ವಿಧಾನಸಭೆ ಬೈ ಎಲೆಕ್ಷನ್ ನಡೆದಿದ್ದು, ಇಂಡಿಯಾ ಮೈತ್ರಿಕೂಟ ಭಾರೀ ಮನ್ನಡೆ ಸಾಧಿಸುತ್ತಿದೆ.

ಪಶ್ಚಿಮ ಬಂಗಾಳ: ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ

ಹಿಮಾಚಲ ಪ್ರದೇಶ: ಎಲ್ಲಾ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ

ಉತ್ತರಾಖಂಡ: ಮಂಗಲೌರ್ ಮತ್ತು ಬದರಿನಾಥ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ

ತಮಿಳುನಾಡು: ವಿಕ್ರವಾಂಡಿಯಲ್ಲಿ ಡಿಎಂಕೆ ಅಭ್ಯರ್ಥಿ ಮುನ್ನಡೆ

ಪಂಜಾಬ್: ಜಲಂಧರ್ ಪಶ್ಚಿಮ ವಿಧಾನಸಭಾ ಉಪ ಚುನಾವಣೆಯಲ್ಲಿ ಎಎಪಿಯ ಮೊಹಿಂದರ್ ಭಗತ್ ಅವರು ಬಿಜೆಪಿಯ ಶೀತಲ್ ಅಂಗುರಾಲ್ ಅವರನ್ನು 37,000 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಬಿಹಾರ: ರೂಪುಲಿ ಕ್ಷೇತ್ರದಲ್ಲಿ ಜೆಡಿಯು ಅಭ್ಯರ್ಥಿ ಮುನ್ನಡೆ

ಮಧ್ಯಪ್ರದೇಶ: ಅಮರವಾರದಲ್ಲಿ ಬಿಜೆಪಿ ಅಭ್ಯರ್ಥಿ ಮುನ್ನಡೆ

Join Whatsapp
Exit mobile version