Home ಟಾಪ್ ಸುದ್ದಿಗಳು ಉಪ ಚುನಾವಣೆ: ಬೊಮ್ಮಾಯಿಗೆ ಮುಖಭಂಗ, ಅಸ್ತಿತ್ವ ಕಾಪಾಡಿಕೊಂಡ ಕಾಂಗ್ರೆಸ್

ಉಪ ಚುನಾವಣೆ: ಬೊಮ್ಮಾಯಿಗೆ ಮುಖಭಂಗ, ಅಸ್ತಿತ್ವ ಕಾಪಾಡಿಕೊಂಡ ಕಾಂಗ್ರೆಸ್

ಬೆಂಗಳೂರು; ರಾಜ್ಯದಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಹಾಗೂ ಜಿದ್ದಾಜಿದ್ದಿಯಿಂದ ಕೂಡಿದ ಉಪಸಮರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತವರು ಜಿಲ್ಲೆಯ ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಗೆಲುವು ಸಾಧಿಸಿದ್ದು, ಬಿಜೆಪಿಗೆ ತೀವ್ರ ಮುಖಭಂಗವುಂಟಾಗಿದೆ.


ಸಿಂದಗಿಯಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದ್ದು, ಹಾನಗಲ್ ಸೋಲಿನ ಗಾಯಕ್ಕೆ ಇದು ಮುಲಾಮು ಹಚ್ಚಿದಂತಾಗಿದೆ. ಜೆಡಿಎಸ್ ಎರಡೂ ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡು ಹೀನಾಯವಾಗಿ ಪರಾಭವಗೊಂಡಿದೆ.
ಮತದಾನಕ್ಕೆ ಮೊದಲೇ ಹಾನಗಲ್ ನಲ್ಲಿ ಗುಪ್ತದಳದ ಆಡಳಿತ ಪಕ್ಷಕ್ಕೆ ಹಿನ್ನಡೆ ಎಂಬ ನಿಶ್ಚಿತ ಎಂಬ ವರದಿಯಿತ್ತು. ಅದರಂತೆ ಹಾನಗಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ 7598 ಮತಗಳ ಗೆಲುವು ದಾಖಲಿಸುವ ಮೂಲಕ ಹಾವೇರಿ ಜಿಲ್ಲೆಯಲ್ಲಿ ಶೂನ್ಯವಾಗಿದ್ದ ಕೈ ಅಸ್ತಿತ್ವಕ್ಕೆ ಮುನ್ನುಡಿ ಬರೆದಿದ್ದಾರೆ.


ಅಂತಿಮ 19 ನೇ ಸುತ್ತಿನ ಅಂತ್ಯಕ್ಕೆ ಮಾನೆ 87113 ಮತ ಪಡೆದರೆ, ಪರಾಭವಗೊಂಡ ಬಿಜೆಪಿಯ ಶಿವರಾಜ ಸಜ್ಜನರ 79545 ಮತಗಳನ್ನು ಪಡೆದರು. ಜೆಡಿಎಸ್ನ ನಿಯಾಝ್ ಶೇಖ್ ನಾಲ್ಕಂಕಿಯನ್ನೂ ತಲುಪಲಿಲ್ಲ.
ಹಾವೇರಿ ಜಿಲ್ಲೆಯಲಿ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸರ್ಕಾರದ ಡಜನ್ ಗಟ್ಟಲೇ ಸಚಿವರ ದಂಡು ಹಾನಗಲ್ನಲ್ಲೇ ಬಿಡಾರ ಹೂಡಿ ಪ್ರಚಾರ ನಡೆಸಿದ್ದರಾದರೂ ಯಾವುದೇ ಪ್ರಯೋಜನವಾಗಿಲ್ಲ. ಗುಪ್ತಚರ ಇಲಾಖೆಯ ವರದಿಯಂತೆ ಮತದಾನದ ಮುನ್ನಾ ದಿನ ಸ್ವತಃ ಸಿಎಂ ತಂತ್ರಗಾರಿಕೆ ಬದಲಿಸಿ ವಶಕ್ಕೆ ತೆಗೆದುಕೊಳ್ಳುವ ಅನೇಕ ಕಸರತ್ತು ನಡೆಸಿದರಾದರೂ ಬಿಜೆಪಿಗೆ ಗೆಲುವು ಧಕ್ಕಲಿಲ್ಲ.


ಎರಡನೇ ಸುತ್ತಿನಲ್ಲಿ ಬಿಜೆಪಿ ಅಲ್ಪ ಮತದ ಮುನ್ನಡೆ ಬಿಟ್ಟರೆ, ಮೊದಲನೆ ಸುತ್ತಿನಿಂದ ಪ್ರತಿ ಸುತ್ತಿನಲ್ಲೂ ಕಾಂಗ್ರೆಸ್ ನ ಮಾನೆ ಮುನ್ನಡೆ ಬಿಟ್ಟುಕೊಟ್ಟಿಲ್ಲವಾಗಿದ್ದು 14 ಸುತ್ತಿನ ನಂತರ 64489 ಹಾಗೂ ಸಜ್ಜನರ 57 682 ಮತಗಳನ್ನು ಪಡೆದಿದ್ದರು.
ಕಳೆದ ಬಾರಿ ದಿವಂಗತ ಸಿ.ಎಂ.ಉದಾಸಿಯವರ ಎದುರು 2018ರ ಚುನಾವಣೆಯಲ್ಲಿ ಸುಮಾರು 6 ಸಾವಿರ ಮತಗಳಿಂದ ಪರಾಭವಗೊಂಡಿದ್ದ ಮಾನೆ ಅಲ್ಲಿಯೇ ಮನೆ ಮಾಡಿದ್ದಲ್ಲದೇ ಕ್ಷೇತ್ರದ ಸಮಸ್ಯೆಗೆ ಸ್ಪಂದಿಸಿದ್ದು ಇಂದು ಅವರ ಗೆಲುವಿಗೆ ರಹದಾರಿಯಾಯಿತಲ್ಲದೇ ಪ್ರಚಾರದ ಅಂತಿಮ ದಿನ ಹಾನಗಲ್ ನಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಶ್ರೀನಿವಾಸ ಮಾನೆ ಮಾಡಿದ ಭಾವನಾತ್ಮಕ ಭಾಷಣ ಜಯವನ್ನು ಮತ್ತಷ್ಟು ಸುಲಭವಾಗಿಸಿತು. ಅಲ್ಲದೇ ಕಾಂಗ್ರೆಸ್ನ ಘಟಾನುಘಟಿ ನಾಯಕರು ಸಹ ಪ್ರಚಾರ ಮಾಡಿದ್ದರಲ್ಲದೇ ಪ್ರತಿಯೊಬ್ಬ ಕಾರ್ಯಕರ್ತರು ಪಕ್ಷದ ಗೆಲುವಿಗಾಗಿ ವ್ಯಾಪಕವಾಗಿ ಶ್ರಮಿಸಿದ್ದರು.
ಸಿಂದಗಿ ವಿವರ: ಸಿಂದಗಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 31,185 ಮತಗಳ ಅಂತರದಿAದ ಬಿಜೆಪಿ ಅಭ್ಯರ್ಥಿ ಕಾಂಗ್ರೆಸ್ ವಿರುದ್ಧ ಜಯಸಾಧಿಸಿದ್ದಾರೆ.

ಭೂಸನೂರಗೆ 93,865 ಮತ. ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಮನಗೂಳಿಗೆ 62,680 ಮತ. ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿಗೆ 4,353 ಮತ ದೊರೆತಿದೆ. ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಠೇವಣಿ ಕಳೆದುಕೊಳ್ಳುವ ಮೂಲಕ ಪಕ್ಷಕ್ಕೆ ಮುಜುಗುರವುಂಟು ಮಾಡಿದ್ದಾರೆ.
ಮುಂದಿನ ಸಾರ್ವತ್ರಿಕ ಚುನಾವಣೆ ಸನಿಹದಲ್ಲೇ ಇರುವಾಗ ಪ್ರಾಮುಖ್ಯತೆ ಪಡೆದಿದ್ದ ಚುನಾವಣೆಯಲ್ಲಿ ರಮೇಶ್ ಭೂಸನೂರು ಪರ ಕಳೆದ ಬಾರಿಯ ಕಡಿಮೆ ಅಂತರದ ಸೋಲಿನ ಅನುಕಂಪ ಕೆಲಸ ಮಾಡಿದೆ.
ಇದೇ ವೇಳೆ ಅನುಕಂಪದ ಮೇಲೆ ಕಣ್ಣಿಟ್ಟು ದಿವಂಗತ ಮನಗೂಳಿ ಅವರ ಮಗ ರಮೇಶ್ ಮನಗೂಳಿ ಕರೆದುಕೊಂಡು ಬಂದು ಕಾಂಗ್ರೆಸ್ ಅವರಿಗೆ ಟಿಕೆಟ್ ನೀಡಿತು. ಜೆಡಿಎಸ್ ನಿಂದ ಬಂದ ಅಶೋಕ್ ಗೆ ಟಿಕೆಟ್ ನೀಡಿದ್ದಕ್ಕೆ ಪಕ್ಷದೊಳಗೆ ಅಸಮಾಧಾನಕ್ಕೆ ಕಾರಣವಾಗಿದೆ.

Join Whatsapp
Exit mobile version