Home ಟಾಪ್ ಸುದ್ದಿಗಳು ಡ್ರೈವಿಂಗ್‌ನಲ್ಲಿರುವಾಗಲೇ ಬಸ್ ಚಾಲಕನಿಗೆ ಹೃದಯಾಘಾತ: ಆಸ್ಪತ್ರೆಯಲ್ಲಿ ಮೃತ್ಯು

ಡ್ರೈವಿಂಗ್‌ನಲ್ಲಿರುವಾಗಲೇ ಬಸ್ ಚಾಲಕನಿಗೆ ಹೃದಯಾಘಾತ: ಆಸ್ಪತ್ರೆಯಲ್ಲಿ ಮೃತ್ಯು

ಕುಂಬಳೆ: ಬಸ್‌ ಚಲಾಯಿಸುತ್ತಿದ್ದ ವೇಳೆಯಲ್ಲಿ ಚಾಲಕ ಹೃದಯಾಘಾತದಿಂದ ಸಾವೀಗೀಡಾದ ಘಟನೆ ಚೇವಾರು ಕುಂಟಂಗರಡ್ಕದಲ್ಲಿ ನಡೆದಿದೆ.

ಕಾಸರಗೋಡು-ಧರ್ಮತ್ತಡ್ಕ ಮಾರ್ಗವಾಗಿ ಸಂಚರಿಸುತ್ತಿದ್ದ ಖಾಸಗಿ ಬಸ್‌‌ನ ಚಾಲಕ ಕುಂಟಗರಡ್ಕದ ಅಬ್ದುಲ್‌ ರಹಿಮಾನ್‌ (42) ಮೃತ ವ್ಯಕ್ತಿ. ಧರ್ಮತ್ತಡ್ಕದಿಂದ ಬಸ್ ಕಾಸರಗೋಡಿಗೆ ತೆರಳುತ್ತಿದ್ದು, ಕುಂಟಗರಡ್ಕಕ್ಕೆ ತಲಪಿದಾಗ ಅಬ್ದುಲ್ ರಹಿಮಾನ್‌ಗೆ ಎದೆನೋವು ಕಾಣಿಸಿಕೊಂಡಿದೆ.

ಅಬ್ದುಲ್ ರಹಿಮಾನ್ ತಕ್ಷಣ ಬಸ್‌‌ಅನ್ನು ರಸ್ತೆ ಬದಿ ನಿಲ್ಲಿಸಿ ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಆ ಬಳಿಕ ಅವರು ಕುಸಿದು ಬಿದ್ದಿದ್ದಾರೆ.

ಅವರನ್ನು ಬಂದ್ಯೋಡು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ..ಮೃತರು ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ.

Join Whatsapp
Exit mobile version