Home ಟಾಪ್ ಸುದ್ದಿಗಳು ಮೋದಿ ರ‍್ಯಾಲಿಗೆ ತೆರಳುತ್ತಿದ್ದ ಬಸ್ ಅಪಘಾತ: ಒಂದೇ ಕುಟುಂಬದ ಮೂವರು ಸಾವು, ಇಬ್ಬರ ಸ್ಥಿತಿ ಗಂಭೀರ

ಮೋದಿ ರ‍್ಯಾಲಿಗೆ ತೆರಳುತ್ತಿದ್ದ ಬಸ್ ಅಪಘಾತ: ಒಂದೇ ಕುಟುಂಬದ ಮೂವರು ಸಾವು, ಇಬ್ಬರ ಸ್ಥಿತಿ ಗಂಭೀರ

ಸಹ್ರಾನಪುರ್: ಪ್ರಧಾನಿ ನರೇಂದ್ರ ಮೋದಿ ಅವರ ರ‍್ಯಾಲಿಯಲ್ಲಿ ಭಾಗಿಯಾಗಲು ತೆರಳುತ್ತಿದ್ದವರನ್ನು ಕರೆದೊಯ್ಯುತ್ತಿದ್ದ ಬಸ್ ​​​ವೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಉತ್ತರಾಖಂಡದ ಡೆಹ್ರಾಡೂನ್ ನಲ್ಲಿ ನಡೆದಿದೆ.


ಪ್ರವೀಣ್ ಚೌಹಾಣ್(45), ಆತನ ಪತ್ನಿ ಮಂಜು ಚೌಹಾಣ್(42), ಮಗಳಾದ ಶಿಲ್ಪಾ(22) ಸ್ಥಳದಲ್ಲೇಮೃತಪಟ್ಟಿದ್ದು, ಉಳಿದಂತೆ ವಿಷ್ಣು(17) ಹಾಗೂ ದಿಕ್ಷೀತ್(20) ಗಂಭೀರ ಗಾಯಗೊಂಡಿದ್ದಾರೆ.


ಪ್ರಧಾನಿ ನರೇಂದ್ರ ಮೋದಿ ರ‍್ಯಾಲಿಯಲ್ಲಿ ಭಾಗಿಯಾಗಲು ಅನೇಕರನ್ನ ಹೊತ್ತು ಬಸ್ಸೊಂದು ತೆರಳುತ್ತಿತ್ತು. ಈ ವೇಳೆ ಕಾರ್ ಒಂದಕ್ಕೆ ಡಿಕ್ಕಿ ಹೊಡೆದಿದೆ.

Join Whatsapp
Exit mobile version