ಹೊಸದಿಲ್ಲಿ: ಭಾರತದಲ್ಲಿ ಕೊರೊನಾ ಸಮಯದಲ್ಲಿ ಬ್ಲಾಕ್ ಫಂಗಸ್ (ಕಪ್ಪು ಶಿಲೀಂಧ್ರ) ಸಾಂಕ್ರಾಮಿಕ ಉಂಟಾಗುವುದಕ್ಕೆ ಕಾರಣ, ಹೆಚ್ಚು ಪ್ರಮಾಣದಲ್ಲಿ ಹಸುವಿನ ಸಗಣಿ ಸುಟ್ಟಿರುವುದು ಮತ್ತು ಕೊರೊನಾ ಸಮಯದಲ್ಲಿ ನೀಡಲಾದ ಸ್ಟಿರಾಯ್ಡಗಳು ಎಂದು ವರದಿಗಳು ತಿಳಿಸಿವೆ.
“ಅಮೆರಿಕನ್ ಸೊಸೈಟಿ ಆಫ್ ಮೈಕ್ರೋಬಯೋಲಜಿ’ ಪ್ರಕಟಿಸಿರುವ ವರದಿಯ ಪ್ರಕಾರ “”ಬೇರೆ ದೇಶಗಳಲ್ಲೂ ಸ್ಟಿರಾಯ್ಡ್ ಬಳಕೆಯಾಗಿದೆಯಾದರೂ ಭಾರತದಲ್ಲಿ ಹೆಚ್ಚಾಗಿ ಶಿಲೀಂಧ್ರಗಳಿಂದ ಸಾಂಕ್ರಾಮಿಕ ಕಾಣಿಸಿಕೊಂಡಿದೆ.
ಶಿಲೀಂಧ್ರದ ಮಾದರಿಗಳಲ್ಲೊಂದಾದ ಮ್ಯೂಕುರೇಲ್ಸ್ ಸಮೃದ್ಧವಾಗಿರುವ ಸಗಣಿಯಂತಹ ವಸ್ತು ಸುಡುವುದರಿಂದ ಈ ರೀತಿ ಸಮಸ್ಯೆಯಾಗಿದೆ. ಇದು ಹೆಚ್ಚು ಜನರಲ್ಲಿ ಸಕ್ಕರೆ ಕಾಯಿಲೆಗೆ ಕಾರಣವಾಗಬಹುದು” ಎಂದು ಹೇಳಲಾಗಿದೆ.
ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದ ಆಸ್ಪತ್ರೆಗಳ ಸುತ್ತಲಿನ ಗಾಳಿಯಲ್ಲಿ ಮ್ಯೂಕುರೇಲ್ಸ್ ಅಂಶ ಶೇ. 51.8 ಹೆಚ್ಚಿದೆ ಎಂದು ವರದಿಗಳು ಹೇಳಿವೆ.