ನವದೆಹಲಿ: ‘ಬುಲ್ಲಿ ಬಾಯಿ’ ಪ್ರಕರಣದ ಆರೋಪಿ ನೀರಜ್ ಬಿಷ್ಣೋಯ್ ಮತ್ತು ‘ಸುಲ್ಲಿ ಡೀಲ್ಸ್’ ಆ್ಯಪ್ ರಚನೆಕಾರ ಓಂಕಾರೇಶ್ವರ ಠಾಕೂರ್ ಅವರಿಗೆ ಮಾನವೀಯ ನೆಲೆಯಲ್ಲಿ ದೆಹಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಪ್ರಕರಣದಲ್ಲಿ ಬಂಧಿತ ಆರೋಪಿಗಳು ಮೊದಲ ಬಾರಿಗೆ ಅಪರಾಧ ಕೃತ್ಯದಲ್ಲಿ ಭಾಗಿಯಾದ ಕಾರಣ ಜೈಲುವಾಸವನ್ನು ಮುಂದುವರಿಸುವುದು ಅವರ ಒಟ್ಟಾರೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯ ಹಿನ್ನೆಲೆಯಲ್ಲಿ ನ್ಯಾಯಾಲಯ ಜಾಮೀನು ನೀಡಿದೆ ಎಂದು ಹೇಳಲಾಗಿದೆ.
ಸದ್ಯ ಆರೋಪಿಗಳು ಯಾವುದೇ ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು ಮತ್ತು ಸಾಕ್ಷ್ಯವನ್ನು ನಾಶಗೊಳಿಸಬಾರದು ಎಂದು ತನ್ನ ಆದೇಶದಲ್ಲಿ ನ್ಯಾಯಾಲಯ ಷರತ್ತು ವಿಧಿಸಿದೆ.
ಮಾತ್ರವಲ್ಲ ಆರೋಪಿಗಳು ದೇಶವನ್ನು ತೊರೆಯಬಾರದು ಮತ್ತು ಪ್ರತಿ ದಿನಾಂಕದಂದು ನ್ಯಾಯಾಲಯದ ಮುಂದೆ ಹಾಜರಾಗಬೇಕೆಂದು ನ್ಯಾಯಾಲಯ ತನ್ನ ಜಾಮೀನು ಆದೇಶದಲ್ಲಿ ಉಲ್ಲೇಖಿಸಿದೆ.