Home ಟಾಪ್ ಸುದ್ದಿಗಳು ‘ಬುಲ್ಡೋಜರ್ ಪದ್ಧತಿ’ ಸ್ವೀಕಾರಾರ್ಹವಲ್ಲ: ಪ್ರಿಯಾಂಕಾ ಗಾಂಧಿ ಕಿಡಿ

‘ಬುಲ್ಡೋಜರ್ ಪದ್ಧತಿ’ ಸ್ವೀಕಾರಾರ್ಹವಲ್ಲ: ಪ್ರಿಯಾಂಕಾ ಗಾಂಧಿ ಕಿಡಿ

ನವದೆಹಲಿ: ಮಧ್ಯಪ್ರದೇಶದ ಛತ್ತರ್ ಪುರ ಜಿಲ್ಲೆಯಲ್ಲಿ ಪ್ರತಿಭಟನೆ ವೇಳೆ ಹಿಂಸಾಚಾರದಲ್ಲಿ ತೊಡಗಿದ ಆರೋಪದಡಿ ವ್ಯಕ್ತಿಯೊಬ್ಬರ ಮನೆಯನ್ನು ಬುಲ್ಡೋಜರ್ ಮೂಲಕ ನೆಲಸಮಗೊಳಿಸಿದ ಘಟನೆಯು ಸ್ವೀಕಾರಾರ್ಹವಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕಿಡಿಕಾರಿದ್ದಾರೆ.


ಈ ಸಂಬಂಧ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆಯನ್ನು ನಿರ್ಧರಿಸುತ್ತದೆ. ಆರೋಪಿಯ ಕುಟುಂಬವನ್ನು ಶಿಕ್ಷಿಸುವುದು, ಅವರ ಸೂರನ್ನು ಧ್ವಂಸಗೊಳಿಸುವುದು, ಕಾನೂನನ್ನು ಪಾಲನೆ ಮಾಡದಿರುವುದು, ನ್ಯಾಯಾಲಯಕ್ಕೆ ಅವಿಧೇಯತೆ ತೋರುವುದು ಇದು ಸರಿಯಲ್ಲ. ಇದು ನ್ಯಾಯವಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಇದು ಅನಾಗರಿಕತೆ ಮತ್ತು ಅನ್ಯಾಯದ ಪರಮಾವಧಿ ಎಂದಿರುವ ಪ್ರಿಯಾಂಕಾ, ಕಾನೂನು ರಚಿಸುವವರು, ಕಾನೂನು ಪಾಲಿಸುವವರು ಹಾಗೂ ಕಾನೂನು ಉಲ್ಲಂಘಿಸುವವರ ನಡುವೆ ವ್ಯತ್ಯಾಸವಿರಬೇಕು. ಸರ್ಕಾರಗಳು ಅಪರಾಧಿಗಳಂತೆ ವರ್ತಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ


‘ರಾಜಧರ್ಮ ಪೂರೈಸಲು ಸಾಧ್ಯವಾಗದವರು ಸಮಾಜ ಅಥವಾ ದೇಶದ ಕಲ್ಯಾಣಕ್ಕಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಬುಲ್ಡೋಜರ್ ಪದ್ಧತಿ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ, ಇದು ನಿಲ್ಲಬೇಕು’ ಎಂದು ಪ್ರಿಯಾಂಕಾ ಒತ್ತಾಯಿಸಿದ್ದಾರೆ.

Join Whatsapp
Exit mobile version