Home ಟಾಪ್ ಸುದ್ದಿಗಳು ಬುಲ್ಡೋಜರ್ ರಾಜಕೀಯ: ಧ್ವಂಸ ಕಾರ್ಯಾಚರಣೆಯ ವರದಿ ಕೇಳಿದ ಕೇಜ್ರಿವಾಲ್ ಸರ್ಕಾರ

ಬುಲ್ಡೋಜರ್ ರಾಜಕೀಯ: ಧ್ವಂಸ ಕಾರ್ಯಾಚರಣೆಯ ವರದಿ ಕೇಳಿದ ಕೇಜ್ರಿವಾಲ್ ಸರ್ಕಾರ

ದೆಹಲಿ: ದೆಹಲಿಯಲ್ಲಿ ನಡೆಸುತ್ತಿರುವ ದ್ವೇಷ ರಾಜಕೀಯದ ಭಾಗವಾದ ಧ್ವಂಸ ಕಾರ್ಯಾಚರಣೆಗಳ ಕುರಿತು ಬಿಜೆಪಿ ಆಡಳಿತದ ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ)ನಿಂದ ವಿವರವಾದ ವರದಿಯನ್ನು ದೆಹಲಿಯ ಆಮ್ ಆದ್ಮಿ ಸರ್ಕಾರ ಕೇಳಿದೆ. ಶಾಹೀನ್ ಬಾಗ್, ಜಹಾಂಗೀರ್ ಪುರಿ ಮದನ್ಪುರ್ ಖಾದರ್, ನ್ಯೂ ಫ್ರೆಂಡ್ಸ್ ಕಾಲೋನಿ, ಮಂಗೋಲ್ ಪುರಿ, ರೋಹಿಣಿ, ಗೋಕುಲಪುರಿ, ಲೋಧಿ ಕಾಲೋನಿ, ಜನಕಪುರಿ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಮೂರು ಪಾಲಿಕೆಗಳು ಅತಿಕ್ರಮಣ ವಿರೋಧಿ ಅಭಿಯಾನಗಳನ್ನು ನಡೆಸಿದ ಕೆಲವು ದಿನಗಳ ನಂತರ ದೆಹಲಿ ಸರ್ಕಾರ ವರದಿ ಕೇಳಿದೆ.

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಮ್ಮ ನಿವಾಸದಲ್ಲಿ ಎಲ್ಲಾ ಎಎಪಿ ಶಾಸಕರೊಂದಿಗೆ ಸಭೆ ನಡೆಸಿ ಈ ಬಗ್ಗೆ ನಿರ್ಧರಿಸಿದ್ದಾರೆ. ಜೊತೆಗೆ ಬಿಜೆಪಿ ಆಡಳಿತದ ಪುರಸಭೆಗಳ ಇಂತಹ ಧ್ವಂಸ ಕಾರ್ಯಾಚರಣೆಗಳನ್ನು ನಿಲ್ಲಿಸುವಂತೆ ಕೇಳಿಕೊಂಡಿದ್ದಾರೆ. ದೆಹಲಿಯಲ್ಲಿನ ಧ್ವಂಸ ಕಾರ್ಯಾಚರಣೆಗಳು 63 ಲಕ್ಷ ಜನರನ್ನು ನಿರಾಶ್ರಿತರನ್ನಾಗಿ ಮಾಡುತ್ತದೆ ಮತ್ತು ಇದು ಸ್ವತಂತ್ರ ಭಾರತದಲ್ಲಿ “ದೊಡ್ಡ ವಿನಾಶ” ಎಂದು ಕೇಜ್ರಿವಾಲ್ ಹೇಳಿದ್ದಾರೆ ಮತ್ತು ಬಿಜೆಪಿ ಅಧಿಕಾರವನ್ನು ದುರುಪಯೋಗ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಬಿಜೆಪಿಯ 15 ವರ್ಷಗಳ ದುರಾಡಳಿತ, ಅವ್ಯವಸ್ಥೆ ಮತ್ತು ರಾಷ್ಟ್ರ ರಾಜಧಾನಿಯಲ್ಲಿನ ಅಕ್ರಮ ಆಸ್ತಿಯ ತೆರವು ಕಾರ್ಯಾಚರಣೆಯ ಬಗ್ಗೆ ಕಟುವಾಗಿ ಟೀಕಿಸಿದ ಅವರು, ದೆಹಲಿಯಲ್ಲಿ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ ಯೋಜಿತ ರೀತಿಯಲ್ಲಿ ಮಾಡಲಾಗಿಲ್ಲ ಎಂದು ದೂರಿದ್ದಾರೆ. “ದೆಹಲಿಯ ಶೇಕಡಾ 80ಕ್ಕಿಂತ ಹೆಚ್ಚು ಪ್ರದೇಶವನ್ನು ಅಕ್ರಮ ಮತ್ತು ಅತಿಕ್ರಮಣ ಎಂದು ಕರೆಯಬಹುದು, ಅಂದರೆ ನೀವು ಶೇಕಡಾ 80 ರಷ್ಟು ದೆಹಲಿಯನ್ನು ನಾಶಪಡಿಸುತ್ತೀರಾ?” ಎಂದು ಕೇಜ್ರಿವಾಲ್ ಕೇಸರಿ ಪಕ್ಷವನ್ನು ಪ್ರಶ್ನೆ ಮಾಡಿದ್ದಾರೆ.

Join Whatsapp
Exit mobile version