ಆನ್’ಲೈನ್ ತರಗತಿಯ ಸ್ಮಾರ್ಟ್ ಫೋನಿಗಾಗಿ ಶಾಲಾ ಬಾಲಕಿಯಿಂದ ಮಾವಿನ ಹಣ್ಣು ಮಾರಾಟ | 1.2 ಲಕ್ಷ ಕೊಟ್ಟು ಹಣ್ಣು ಖರೀದಿಸಿದ ಉದ್ಯಮಿ !

Prasthutha: June 30, 2021

ಜಾರ್ಖಂಡ್ : ಜಮ್ ಶೆಡ್ ಪುರದ 11 ವರ್ಷದ ತುಳಸಿ ಕುಮಾರಿ ಎಂಬ ಬಾಲಕಿ ಆನ್ ಲೈನ್ ತರಗತಿಗೆ ಹಾಜರಾಗಲು ಹೊಸ ಸ್ಮಾರ್ಟ್ ಫೋನ್ ಖರೀದಿಸಲು ಮಾವಿನ ಹಣ್ಣು ಮಾರಿ ತನ್ನ ಕನಸನ್ನು ನನಸು ಮಾಡಿದ್ದಾಳೆ.

ಅಚ್ಚರಿಯ ವಿಷಯವೆಂದರೆ ಬಾಲಕಿಯ ಬಡತನವನ್ನು ಮತ್ತು ಆಕೆಯ ಕನಸನ್ನು ಸಾಮಾಜಿಕ ಜಾಲತಾಣದ ಮುಖಾಂತರ ಅರಿತ ಮುಂಬೈ ಮೂಲದ ಉದ್ಯಮಿ ಅಮೇಯ ಹೆಟೆ ತುಲಸಿ ಕುಮಾರಿಯಿಂದ 12 ಮಾವಿನ ಹಣ್ಣನ್ನು ತಲಾ 10,000 ದಂತೆ 1 ಲಕ್ಷದ 20 ಸಾವಿರಕ್ಕೆ ಖರೀದಿಸಿ ಆಕೆಯ ಶಿಕ್ಷಣ ಮುಂದುವರೆಸಲು ನೆರವಾಗಿದ್ದಾರೆ.

ಇನ್ನು ಈ ಕುರಿತು ಮಾತನಾಡಿದ ಬಾಲಕಿ ತುಳಸಿ ಕುಮಾರಿ, ಕೋವಿಡ್ ಲಾಕ್ ಡೌನ್ ನಿಂದಾಗಿ ನಮ್ಮ ಕುಟುಂಬದ ಪರಿಸ್ಥಿತಿ ಹದಗೆಟ್ಟಿತ್ತು.ಆನ್ ಲೈನ್ ತರಗತಿ ಹಾಜರಾಗಲು ಹೆತ್ತವರಿಗೆ ಫೋನ್ ಖರೀದಿಸಲು ಯಾವುದೇ ಮಾರ್ಗವಿರಲಿಲ್ಲ. ನಾನು ಸ್ಮಾರ್ಟ್ ಫೋನ್ ಖರೀದಿಸಲು ಬಯಸಿದ್ದೆ ಆದರೆ ಮಾವಿನ ಹಣ್ಣು ಮಾರಾಟ ಮಾಡಿ ಗಳಿಸಿದ ಹಣದಿಂದ ಮನೆಗೆ ಪಡಿತರ ಖರೀದಿಸಲೂ ಸಾಕಾಗುತ್ತಿರಲಿಲ್ಲ. ಆಗ ಒಬ್ಬರು ಸರ್ ನನ್ನಿಂದ 12 ಮಾವಿನ ಹಣ್ಣನ್ನು ತಲಾ 10 ಸಾವಿರದಂತೆ 1 ಲಕ್ಷದ 20 ಸಾವಿರ ರೂಪಾಯಿಗೆ ಖರೀದಿಸಿದರು ಮತ್ತು ಸ್ಮಾರ್ಟ್ ಫೋನ್ ಕೂಡ ಖರೀದಿಸಿ ಕೊಟ್ಟರು ಎಂದು ಬಾಲಕಿ ತಿಳಿಸಿದ್ದಾಳೆ.

ಘಟನೆಯನ್ನು ವಿವರಿಸಿದ ತುಳಸಿ ಅವರ ತಾಯಿ ಪದ್ಮಿನಿ ದೇವಿ, 5ನೇ ತರಗತಿ ವಿದ್ಯಾರ್ಥಿಯಾಗಿರುವ ತಮ್ಮ ಮಗಳು ಆನ್ ಲೈನ್ ನಲ್ಲಿ ತನ್ನ ಶಿಕ್ಷಣವನ್ನು ಮುಂದುವರಿಸಲು ಸ್ಮಾರ್ಟ್ ಫೋನ್ ಬಯಸಿದ್ದಳು ಎಂದು ಹೇಳಿದರು.
ಅವಳು ಸ್ಮಾರ್ಟ್ ಫೋನ್ ಖರೀದಿಸಲು ಹಠಹಿಡಿದಿದ್ದಳು ಮತ್ತು ಲಾಕ್ ಡೌನ್ ಸಮಯದಲ್ಲಿ ರಸ್ತೆ ಬದಿಯಲ್ಲಿ ಮಾವಿನ ಹಣ್ಣುಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದಳು. ಮುಂಬೈನ ಓರ್ವ ವ್ಯಕ್ತಿಗೆ ಅವಳ ಬಗ್ಗೆ ತಿಳಿದಾಗ, ಅವರು ಸಹಾಯ ಮಾಡಿದ್ದಾರೆ. ಇದರಿಂದ ಅವಳು ಅಧ್ಯಯನ ಮಾಡಲು,ಏನನ್ನಾದರೂ ಕನಸನ್ನು ಸಾಧಿಸಬಹುದು ಎಂದು ಹೇಳಿದರು.ತನ್ನ ಮಗಳ ಶಿಕ್ಷಣದ ಉತ್ಸಾಹ ಹೆಚ್ಚಿಸಿದ್ದಕ್ಕಾಗಿ ಅವಳಿಗೆ ಪ್ರೋತ್ಸಾಹಿಸಿದ ಉದ್ಯಮಿ ಅಮೇಯ ಹೆಟೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಉದ್ಯಮಿ ಅಮೆಯ ಹೆಟೆ ಸಾಮಾಜಿಕ ಮಾಧ್ಯಮದ ಮುಖಾಂತರ ಬಾಲಕಿಯ ಬಗ್ಗೆ ತಿಳಿದುಕೊಂಡು ಅವಳಿಗೆ ಸಹಾಯ ಮಾಡಲು ನಿರ್ಧರಿದೆ. ಅವಳ ಕಷ್ಟದ ಬಗ್ಗೆ ಕೇಳಿದಾಗ, ಅದು ನನ್ನ ಹೃದಯವನ್ನು ಸ್ಪರ್ಶಿಸಿತು. ಬಡತನದೊಂದಿಗಿನ ಹೋರಾಟದ ನಡುವೆ ಆಕೆಗೆ ಶಿಕ್ಷಣ ಪಡೆಯುವ ಆಸಕ್ತಿ ನನ್ನನು ಪ್ರಭಾವಿತಗೊಳಿಸಿದೆ. ಪರಿಸ್ಥಿತಿಗಳನ್ನು ಬಿಟ್ಟುಕೊಡದಿರುವುದು ಮತ್ತು ಅವಳ ಕನಸುಗಳಿಗಾಗಿ ಪ್ರಯತ್ನಗಳನ್ನು ಮಾಡುತ್ತಿರುವುದು ಅಚ್ಚರಿಗೊಳಿಸಿದೆ ಎಂದು ಹೇಳಿದರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ