ಅಪಾಯದಂಚಿನಲ್ಲಿರುವ ಕಟ್ಟಡ ಶೀಘ್ರದಲ್ಲೇ ತೆರವು: ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್

Prasthutha|

- Advertisement -

ಬೆಂಗಳೂರು: ಬಿಬಿಎಂಪಿ ಅಧಿಕಾರ ವಿಕೇಂದ್ರೀಕರಣ ಸಂಬಂಧ ನೂತನ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ಎಲ್ಲಾ ವಲಯ ವಿಶೇಷ ಆಯುಕ್ತರಿಗೆ ವಿಶೇಷ ಅಧಿಕಾರ ನೀಡಿದ್ದಾರೆ.
ನೇಮಕಾತಿ ಆಗಿರುವ ವಲಯಗಳಲ್ಲಿ ಆಗು ಹೋಗು-ಕುಂದು ಕೊರತೆ ಗಳಿಗೆ ಸ್ಪಂದಿಸಬೇಕು. ಬೆಳಿಗ್ಗೆ 8 ರಿಂದಲೇ ಪ್ರದಕ್ಷಿಣೆ ಹಾಕಬೇಕು. 10 ಗಂಟೆಯಿಂದ 5 ಗಂಟೆವರೆಗೂ ವಲಯ ಕಚೇರಿ ಹಾಗೂ ಕೇಂದ್ರ ಕಚೇರಿಗಳಲ್ಲಿ ಲಭ್ಯ ಇರಬೇಕು ಎಂದು ವಿಶೇಷ ಆಯುಕ್ತರಿಗೆ ಸೂಚಿಸಿದ್ದಾರೆ.

ಜಂಟಿ ಆಯುಕ್ತರು ಮುಖ್ಯ ಅಭಿಯಂತರರಿಗೆ ಮಾಹಿತಿ ಕೊಡಬೇಕು.ಆಯುಕ್ತರ ಆಡಳಿತ ನಿರ್ಧಾರಕ್ಕೆ ಸೀಮಿತ ಎಲ್ಲ ಅಯುಕ್ತರು ವಾರದ ಪ್ರತಿ ದಿನ ಒಬ್ಬೊರಂತೆ ಮಾಧ್ಯಮದ ಜತೆ ಮಾತನಾಡಬೇಕು ಎಂದೂ ಅವರು ಉಲ್ಲೇಖಿಸಿದ್ದಾರೆ.

- Advertisement -

ರಾಜಧಾನಿ ಬೆಂಗಳೂರಿನಲ್ಲಿ ಮಳೆ ಹಿನ್ನೆಲೆ ಅಪಾಯದಂಚಿನಲ್ಲಿರುವ ಕಟ್ಟಡಗಳನ್ನು ಶೀಘ್ರದಲ್ಲೇ ತೆರವು ಮಾಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕಟ್ಟಡ ತೆರವು ಸಂಬಂಧ ಸಮೀಕ್ಷೆ, ಗುರುತು ಮಾಡುವ ಪ್ರಕ್ರಿಯೆ ಜರುಗಿದೆ. ಹೀಗಾಗಿ, ಶನಿವಾರ ತೆರವು ಕಾರ್ಯ ನಡೆಯಲಿದೆ ಎಂದರು.

ಬಹಳ ಹಳೆಯ ಕಟ್ಟಡ ಇರುವುದರಿಂದ ಮಾಹಿತಿ ಕೊಡಲಾಗಿದೆ. ಅದೇ ರೀತಿ, ಕಳಪೆ ಕಾಮಗಾರಿ, ಗುಣಮಟ್ಟ ತಗ್ಗಿರುವ, ದೊಡ್ಡ ಎತ್ತರದ ಕಟ್ಟಡಗಳು ಇದೆ.ಇದರ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತದೆ ಎಂದ ಅವರು, ಮಳೆಗಾಲದ ಮುನ್ನೆಚ್ಚರಿಕೆ ವಿಚಾರ ಸಂಬಂಧಿತ ಅಧಿಕಾರಿಗಳ ಜೊತೆ ಚರ್ಚೆ ಆಗಿದೆ. ಅಪಾಯಕಾರಿ ಪ್ರದೇಶ, ಮರ ಸೇರಿದಂತೆ ಇನ್ನಿತರ ಮಾಹಿತಿಯ ಪಟ್ಟಿ ಸಿದ್ಧ ಮಾಡಲಾಗುತ್ತದೆ ಎಂದರು.ಇನ್ನೂ, ಅಪಾಯಕಾರಿ ಮರದ ಮಾಹಿತಿ ಕೊಡಿ ಎಂದು ನಾಗರಿಕರಿಗೆ ಅವಕಾಶ ನೀಡಲಾಗಿದ್ದು, ಬಿಬಿಎಂಪಿ ಸಹಾಯ ಆ್ಯಪ್ ಬಳಸಿಕೊಳ್ಳಬೇಕು. ಯಾವುದೇ ಸಮಸ್ಯೆ ಇದ್ದಲ್ಲಿ, ನಾಗರೀಕರು ನೇರವಾಗಿ ಬಿಬಿಎಂಪಿ ಗೆ ದೂರುಗಳನ್ನು ಸಲ್ಲಿಸಬಹುದು ಎಂದು ಸಲಹೆ ಮಾಡಿದರು. ಕೆಎಸ್ ಆರ್ ಟಿಸಿ ಬಸ್ ಅಪಘಾತ ವಿಚಾರ ಪ್ರತಿಕ್ರಿಯಿಸಿದ ಅವರು, ನಮ್ಮ ವರದಿ ಪ್ರಕಾರ ಅದು ರಸ್ತೆ ಹಂಪ್ ಬಳಿ ನಿಲ್ಲಿಸುವಾಗ, ಗುಂಡಿ ಇಲ್ಲ ಎಂದು ಗೊತ್ತಾಗಿದೆ. ಬಸ್ ಡಿಕ್ಕಿ ಹೊಡೆದಿದೆ ಎಂಬ ಕಾರಣನಾ? ನೋಡಬೇಕಿದೆ ಚಾಲಕರ ಬಳಿ ಪೂರ್ಣ ಮಾಹಿತಿ ಪಡೆದು ತನಿಖೆ ಆಗಬೇಕಾಗಿದೆ.ಆದರೆ, ಪಾಲಿಕೆ ಕಾರಣ ಎಂದು ಹೇಳಲು ಸಾಧ್ಯವಿಲ್ಲ ಎಂದು ನುಡಿದರು.

Join Whatsapp
Exit mobile version