Home ಟಾಪ್ ಸುದ್ದಿಗಳು ಕಟ್ಟಡ ಕುಸಿತ: ತಾಯಿ, ಅಜ್ಜಿ ದಾರುಣ ಸಾವು; ಡೋರೆಮನ್ ಕಾರ್ಟೂನ್ ನೋಡಿ ಬದುಕುಳಿದ ಬಾಲಕ

ಕಟ್ಟಡ ಕುಸಿತ: ತಾಯಿ, ಅಜ್ಜಿ ದಾರುಣ ಸಾವು; ಡೋರೆಮನ್ ಕಾರ್ಟೂನ್ ನೋಡಿ ಬದುಕುಳಿದ ಬಾಲಕ

ಲಕ್ನೋ: ಕಟ್ಟಡ ಉರುಳಿ ತಾಯಿ ಮತ್ತು ಅಜ್ಜಿಯನ್ನು ಕಳೆದುಕೊಂಡಿರುವ ಆರು ವರ್ಷದ ಬಾಲಕ ಬದುಕುಳಿದಿದ್ದು, ತಾನು ಉಳಿಯಲು ಕಾರ್ಟೂನ್ ಕಾರಣ ಎಂದು ಹೇಳಿದ್ದಾನೆ.


ಅದೃಷ್ಟ ಬಾಲಕನನ್ನು ಮುಸ್ತಫಾ ಎಂದು ಗುರುತಿಸಲಾಗಿದೆ. ಮುಸ್ತಫಾನ ತಾಯಿ ಉಜ್ಮಾ ಮತ್ತು ಅಜ್ಜಿ ಬೇಗಂ ಹೈದರ್ ಮೃತ ದುರ್ದೈವಿಗಳು. ತಾಯಿ ಮೃತಪಟ್ಟಿರುವುದನ್ನು ಮುಸ್ತಫಾನಿಗೆ ಗುರುವಾರದವರೆಗೆ ಹೇಳಿರಲಿಲ್ಲ.


ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯುತ್ತಿರುವ ಬಾಲಕ ಮುಸ್ತಫಾ, “ಅಮ್ಮ ಕೂಗುತ್ತ ಓಡುವುದು ಕೇಳಿಸಿದೆ. ಮರುಕ್ಷಣವೇ ಎಲ್ಲ ಕತ್ತಲಾಗಿ ಹೋಯಿತು.ಕಟ್ಟಡ ಬೀಳುವಾಗ ನಾನು ನಡುಗಿ ಹೋದೆ. ಆದರೆ ಆಗ ತಾನೆ ನೋಡಿದ ಡೋರಮನ್ ಕಾರ್ಟೂನ್ ಚಿತ್ರದಲ್ಲಿನ ಪಾತ್ರ ನೋಬಿಟಾ ಭೂಕಂಪ ಆದಾಗ ಮಂಚದ ಅಡಿ ಮೂಲೆಯಲ್ಲಿ ಕೂತು ಪಾರಾಗಿರಿ ಎಂದು ಹೇಳಿದ್ದು ನೆನಪಾಯಿತು. ತಡ ಮಾಡದೆ ಹೋಗಿ ಕುಳಿತೆ; ಬದುಕುಳಿದೆ” ಎಂದು ಹೇಳಿದ್ದಾನೆ.


ತಂದೆ ಅಬ್ಬಾಸ್ ಹೈದರ್ ಸಮಾಜವಾದಿ ಪಕ್ಷದ ವಕ್ತಾರ. ಅಜ್ಜ ಹಿರಿಯ ಕಾಂಗ್ರೆಸ್ ನಾಯಕ ಅಮೀರ್ ಹೈದರ್ ಗಾಯಗೊಂಡು ಬದುಕುಳಿದಿದ್ದಾರೆ. ಕಳೆದ ಸೋಮವಾರ ಆ ಕುಟುಂಬವು ಮುಸ್ತಾಫಾನ ಅಜ್ಜ, ಅಜ್ಜಿಯ ಮದುವೆಯ ಸುವರ್ಣ ಮಹೋತ್ಸವವನ್ನು ಆಚರಿಸಿತ್ತು.

Join Whatsapp
Exit mobile version