ಸಾಗಾಟದ ವೇಳೆ 2 ಕೋಣ ಅಪಹರಿಸಿ, 50 ಸಾವಿರ ರೂ. ಬೇಡಿಕೆಯಿಟ್ಟ ಅಪಹರಣಕಾರರು!

Prasthutha|

ಭೋಪಾಲ್ : ಮಧ್ಯಪ್ರದೇಶದ ಭೋಪಾಲ್ ನ ಬೇತುಲ್ ಜಿಲ್ಲೆಯಲ್ಲಿ ಕೋಣಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ, ಅವುಗಳನ್ನು ಅಪಹರಿಸಿ 50,000 ರೂ. ನೀಡಬೇಕೆಂದು ಬೇಡಿಕೆಯಿಟ್ಟ ಘಟನೆ ನಡೆದಿದೆ.

- Advertisement -

ಒಂದು ವಾರದ ಹಿಂದೆ ಅಮರ್ ಚಂದ್ ಪಟೇಲ್ ಎಂಬ ರೈತ ಪಿಕ್ ಅಪ್ ವಾಹನದ ಮೂಲಕ ಎರಡು ಕೋಣಗಳನ್ನು ಸಾಗಿಸುತ್ತಿದ್ದ. ಈ ವೇಳೆ ಆರೋಪಿ ದೀಪಚಂದ್ ಎಂಬಾತನ ತಂಡ ವಾಹನವನ್ನು ಪಾವೇಲ್ ಗ್ರಾಮದ ಬಳಿ ತಡೆದುನಿಲ್ಲಿಸಿ, ಬಲವಂತವಾಗಿ ಎರಡು ಕೋಣಗಳನ್ನು ಹೊತ್ತೊಯ್ದಿದ್ದಾನೆ.

ಸ್ವಲ್ಪ ಸಮಯದ ಬಳಿಕ ರೈತನಿಗೆ ಕರೆ ಮಾಡಿ ಕೋಣಗಳು ಬೇಕಾದರೆ 50,000 ರೂ. ನೀಡಬೇಕೆಂದು ಬೆದರಿಕೆಯೊಡ್ಡಿದ್ದಾನೆ. ರೈತ ಈ ಸಂಬಂಧ ದೂರು ದಾಖಲಿಸಿದ್ದಾನೆ. ಇದೀಗ ಆರೋಪಿ ದೀಪಚಂದ್ ಎಂಬಾತನನ್ನು ಬಂಧಿಸಲಾಗಿದೆ. ಒಂದು ಕೋಣ ಪತ್ತೆಹಚ್ಚಿ ಹಿಂದಿರುಗಿಸಲಾಗಿದೆ. ಇನ್ನೂ ಐವರು ಆರೋಪಿಗಳು ತಲೆ ಮರೆಸಿಕೊಂಡಿದ್ದರು, ಇನ್ನೊಂದು ಕೋಣ ಅವರ ಬಳಿಯಿದೆ ಎನ್ನಲಾಗಿದೆ.

Join Whatsapp