Home ಟಾಪ್ ಸುದ್ದಿಗಳು ಜನವರಿ 31ರಿಂದ ಬಜೆಟ್ ಅಧಿವೇಶನ, ಫೆ.1ರಂದು ಬಜೆಟ್ ಮಂಡನೆ

ಜನವರಿ 31ರಿಂದ ಬಜೆಟ್ ಅಧಿವೇಶನ, ಫೆ.1ರಂದು ಬಜೆಟ್ ಮಂಡನೆ

ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನವು ಜನವರಿ 31ರಿಂದ ಆರಂಭವಾಗಲಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಫೆಬ್ರವರಿ 1ರಂದು ಸಂಸತ್ತಿನಲ್ಲಿ ಬಜೆಟ್ ಮಂಡನೆಯಾಗಲಿದೆ. ಸಂಸತ್ ಅಧಿವೇಶನದ ಮೊದಲ ಭಾಗವು ಫೆಬ್ರವರಿ 11ರಂದು ಕೊನೆಯಾಗಲಿದೆ.

ಅಧಿವೇಶನದ ಎರಡನೆಯ ಭಾಗವು ಮಾರ್ಚ್ 14ರಂದು ಆರಂಭವಾಗಲಿದ್ದು ಏಪ್ರಿಲ್ 8ಕ್ಕೆ ಕೊನೆಗೊಳ್ಳುವಂತೆ ದಿನಾಂಕಗಳನ್ನು ಶಿಫಾರಸು ಮಾಡಲಾಗಿದೆ.

Join Whatsapp
Exit mobile version