ಸಹೋದ್ಯೋಗಿಯಿಂದಲೇ ಗುಂಡೇಟು: 5 ಸೈನಿಕರು ಸಾವು

Prasthutha|

ಅಮೃತಸರ:  ಬಿಎಸ್ ಎಫ್ ಜವಾನ ತನ್ನ ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿ ಕನಿಷ್ಠ ಐವರು ಗಡಿ ಭದ್ರತಾ ಪಡೆ ಸಿಬ್ಬಂದಿ ಮೃತಪಟ್ಟ ಘಟನೆ ಪಂಜಾಬ್‌’ನ ಅಮೃತಸರದ ಫೋರ್ಸ್ ಕ್ಯಾಂಪ್‌’ನಲ್ಲಿ ಭಾನುವಾರ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿ ಅಟ್ಟಾರಿ-ವಾಘಾ ಗಡಿ ದಾಟುವಿಕೆಯಿಂದ ಸುಮಾರು 20 ಕಿಮೀ ದೂರದಲ್ಲಿರುವ ಖಾಸಾ ಪ್ರದೇಶದ ಫೋರ್ಸ್ ಮೆಸ್‌ನಲ್ಲಿ ಈ ಘಟನೆ ನಡೆದಿದೆ.

ಗುಂಡಿನ ದಾಳಿ ನಡೆಸಿದ ಜವಾನ ಸೇರಿದಂತೆ ಐವರು ಯೋಧರ ಮೃತಪಟ್ಟಿದ್ದಾರೆ. ದಾಳಿಯಲ್ಲಿ ಓರ್ವ ಯೋಧ ಗಾಯಗೊಂಡಿದ್ದಾರೆ ಎನ್ನಲಾಗಿದೆ.

Join Whatsapp
Exit mobile version