Home ಟಾಪ್ ಸುದ್ದಿಗಳು ಯಡಿಯೂರಪ್ಪ ಚುನಾವಣೆಯಿಂದ ದೂರ ಸರಿದರೆ ಏನೂ ಪರಿಣಾಮ ಬೀರಲ್ಲ: ಎಂಟಿಬಿ ನಾಗರಾಜ್

ಯಡಿಯೂರಪ್ಪ ಚುನಾವಣೆಯಿಂದ ದೂರ ಸರಿದರೆ ಏನೂ ಪರಿಣಾಮ ಬೀರಲ್ಲ: ಎಂಟಿಬಿ ನಾಗರಾಜ್

ಬೆಂಗಳೂರು: ಬಿಜೆಪಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರಿಗೆ ವಯಸ್ಸಾಗಿದೆ. ಚುನಾವಣೆಯಿಂದ ದೂರ ಸರಿದರೆ ಏನೂ ಪರಿಣಾಮ ಬೀರುವುದಿಲ್ಲ ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದರು.


ಈ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಸುಮ್ಮನೆ ಮನೆಯಲ್ಲಿ ಕೂರುವವರಲ್ಲ. ಅಲ್ಲದೇ, ಯಾಕೆ ಅವರು ಚುನಾವಣೆಗೆ ನಿಲ್ಲಲ್ಲ ಅವರನ್ನೇ ಕೇಳಬೇಕು. ಅವರು ವಯಸ್ಸಾಯ್ತು ಎಂದು ಭಾವಿಸಿರಬಹುದು. ಮೂರು ಸಾರಿ ಮುಖ್ಯಮಂತ್ರಿ ಆಗಿದ್ದೇನೆ ಎಂದು ಅವರ ಮನಸ್ಸಿಗೂ ಬಂದಿರಬಹುದು ಎಂದರು.


ಅವರ ಮಕ್ಕಳೂ ರಾಜಕೀಯದಲ್ಲಿ ಇದ್ದಾರಲ್ಲ. ಯಡಿಯೂರಪ್ಪ ಅವರೂ ಇರಬೇಕು. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಬೇಕು ಎಂದು ಹೇಳಿದರು.

Join Whatsapp
Exit mobile version