ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ಆಪ್ತನ ಮನೆ ಸೇರಿದಂತೆ ಏಕ ಕಾಲದಲ್ಲಿ 50 ಕಡೆ ಐಟಿ ದಾಳಿ !

Prasthutha|

ಬೆಂಗಳೂರು: ಆದಾಯ ತೆರಿಗೆ ಬಾಕಿ ಉಳಿಸಿಕೊಂಡ ನಗರದ ಪ್ರಮುಖ  ಉದ್ಯಮಿಗಳ ಮನೆ, ಕಂಪನಿ ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಕಚೇರಿಗಳು ಸೇರಿ 50ಕ್ಕೂ ಹೆಚ್ಚು ಕಡೆಗಳಲ್ಲಿ ದಿಢೀರ್ ದಾಳಿ ನಡೆಸಿರುವ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

- Advertisement -

ನಗರವಲ್ಲದೇ ಗೋವಾದಿಂದ ಬಂದಿದ್ದ 300ಕ್ಕೂ ಮಂದಿ ಅಧಿಕಾರಿಗಳ ತಂಡವು ಇಂದು ಮುಂಜಾನೆಯಿಂದಲೇ ಎಕಕಾಲದ ದಾಳಿ ನಡೆಸಿ ಆಸ್ತಿಪಾಸ್ತಿಗಳ ದಾಖಲೆ ಪತ್ರಗಳ‌ ಪರಿಶೀಲನೆ ಕೈಗೊಂಡಿದ್ದಾರೆ.

ಚಾರ್ಟೆಡ್‌ ಅಕೌಂಟೆಂಟ್ ಗಳಾದ  ವಿದ್ಯಾರಣ್ಯಪುರದ ಲಕ್ಷ್ಮೀಕಾಂತ್‌, ಅಮಲಾ ಅವರ ಮನೆ, ಹೆಗಡೆನಗರ, ಎನ್‌.ಆರ್.

- Advertisement -

ರಾಯಲ್‌ ಅಪಾರ್ಟಮೆಂಟ್‌, ಜಾಲಹಳ್ಳಿ ಅಪಾರ್ಟಮೆಂಟ್‌ ಸಹಕಾರ ನಗರದ ರಾಹುಲ್ ಎಂಟರ್ ಪ್ರೈಸಸ್, ಸಿಮೆಂಟ್ ಮತ್ತು ಸ್ಟೀಲ್ ಡೀಲರ್ ಕಚೇರಿಗಳು

ಸೇರಿದಂತೆ ಸುಮಾರು ಐವತ್ತಕ್ಕೂ ಅಧಿಕ ಕಡೆಗಳಲ್ಲಿ ದಾಳಿಯನ್ನು ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ನಗರದಲ್ಲಿ ಇತ್ತೀಚಿಗೆ ನಡೆದ ದೊಡ್ಡ ಐಟಿ ದಾಳಿ ಇದಾಗಿದ್ದು ಅಧಿಕಾರಿಗಳು ಮುಂಜಾನೆಯಿಂದಲೇ ಅದಾಯ ವಂಚನೆ ಸಂಬಂಧ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಸರಕಾರಕ್ಕೆ ತೆರಿಗೆ ವಂಚನೆಯನ್ನು ಮಾಡಿದ ಆರೋಪದ ಹಿನ್ನೆಲೆಯಲ್ಲಿ ಈ ದಾಳಿಯನ್ನು ನಡೆಸಲಾಗಿದೆ  ಅಧಿಕಾರಿಗಳು 120 ಕಾರುಗಳನ್ನು ನಿನ್ನೆಯೇ ಬುಕ್ ಮಾಡಿ ಮುಂಜಾನೆಯಿಂದ ಎಕಕಾಲದ ದಾಳಿ ನಡೆಸಿದ್ದಾರೆ.

ಸುಮಾರು 50 ಕಡೆಗಳಲ್ಲಿ ನಡೆದ ದಾಳಿಯ ವೇಳೆ ಸ್ಥಳೀಯ ಪೊಲೀಸರ ಭದ್ರತೆಯನ್ನು ಪಡೆದುಕೊಳ್ಳಲಾಗಿತ್ತು ದಾಳಿ ನಡೆಸಿದ ಉದ್ಯಮಿಗಳ ಮನೆ, ಕಂಪನಿ ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಕಚೇರಿಗಳಿಗೆ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿತ್ತು.

ಆದಾಯ ತೆರಿಗೆ ವಂಚನೆಯ ಉದ್ಯಮಿಗಳ ಮನೆ, ಕಂಪನಿ ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಕಚೇರಿಗಳಲ್ಲಿ ಆಸ್ತಿ ಪಾಸ್ತಿ ಗಳು,ಚಿನ್ನ,ಐಷಾರಾಮಿ ವಸ್ತುಗಳು ಪರಿಶೀಲನೆ ನಡೆಸಿ ಮಾಹಿತಿಯನ್ನು ಐಟಿ ಅಧಿಕಾರಿಗಳು ಪಡೆದುಕೊಂಡಿದ್ದಾರೆ.

ಆದಾಯ ತೆರಿಗೆ ವಂಚನೆ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ಯಡಿಯೂರಪ್ಪ ಆಪ್ತ ಉಮೇಶ್ ಮನೆ ಮೇಲೆ ಕೂಡ ದಾಳಿ ನಡೆದಿದೆ.
ರಾಜಾಜಿನಗರ ಬಾಷ್ಯಂ ಸರ್ಕಲ್​ ನ ರಾಮಮಂದಿರ ಬಳಿ‌ ಇರುವ ಉಮೇಶ ಮನೆ ಕಚೇರಿ ಹಾಗೂ ಸಂಬಂಧಿಕರ ಮನೆ ಸೇರಿ ಉಮೇಶ್​​ಗೆ ಸಂಬಂಧಿತ 6 ಕಡೆಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಲಾಗಿದೆ.
ಉಮೇಶ್ ಅವರು ಬಿಎಸ್ ವೈ ಅಲ್ಲದೇ ಸಂಸದ ರಾಘವೇಂದ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಮೂವರಿಗೂ ಪಿಎ ಕೆಲಸ ಮಾಡುತ್ತಿದ್ದರು. ರಾಘವೇಂದ್ರ ಬೆಂಗಳೂರಿಗೆ ಬಂದಾಗ ರಾಘವೇಂದ್ರ ಅವರ ಕೆಲಸಗಳ ನಿರ್ವಹಣೆ ಮಾಡುತ್ತಿದ್ದರು. ಯಡಿಯೂರಪ್ಪ ವಿಪಕ್ಷ ನಾಯಕರಾಗಿದ್ದಾಗ ಮತ್ತು ಮುಖ್ಯಮಂತ್ರಿ ಆಗಿದ್ದಾಗ ಅವರಿಗೆ ಉಮೇಶ್ ಪಿಎ ಆಗಿದ್ದರು.


ಕಂಡಕ್ಟರ್ ಕಂ ಡ್ರೈವರ್:
ಬಿಎಸ್ ವೈ ಮುಖ್ಯಮಂತ್ರಿ ಆಗುವ ಮೊದಲು ಬಿಎಂಟಿಸಿ ಬಸ್ ಕಂಡಕ್ಟರ್ ಕಂ ಡ್ರೈವರ್ ಆಗಿದ್ದ ಉಮೇಶ್ ಯಲಹಂಕದ ಪುಟ್ಟೇನಹಳ್ಳಿ ಬಿಎಂಟಿಸಿ ಡಿಪೋದಲ್ಲಿ ಕೆಲಸ ಮಾಡುತ್ತಿದ್ದ. ಡೆಪ್ಯುಟೇಷನ್ ಮೇಲೆ ಬಿಎಸ್‌ವೈ ಆಪ್ತನಾಗಿ ಕೆಲಸ ಮಾಡುತ್ತಾ ಉಮೇಶ್ ಭಾಷ್ಯಂ ಸರ್ಕಲ್‌ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ.

Join Whatsapp
Exit mobile version