Home ಟಾಪ್ ಸುದ್ದಿಗಳು ಮದುವೆ ನಿಶ್ಚಯವಾಗಿದ್ದ ಯುವತಿಯ ಬರ್ಬರ ಕೊಲೆ

ಮದುವೆ ನಿಶ್ಚಯವಾಗಿದ್ದ ಯುವತಿಯ ಬರ್ಬರ ಕೊಲೆ

ದಾವಣಗೆರೆ: ಮದುವೆ ನಿಶ್ಚಯವಾಗಿದ್ದ ಯುವತಿಯನ್ನು ಚೂರಿಯಿಂದ ಚುಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಪಿ.ಜೆ. ಬಡಾವಣೆಯಲ್ಲಿ ನಡೆದಿದೆ.


ವಿನೋಬನಗರದ ಚಾಂದ್ ಸುಲ್ತಾನ (28) ಮೃತರು ಎಂದು ಗುರುತಿಸಲಾಗಿದೆ.


ತೆರಿಗೆ ಸಲಹೆಗಾರರ ಕಚೇರಿಯಲ್ಲಿ ಚಾಂದ್ ಸುಲ್ತಾನ ಆಡಿಟಿಂಗ್ ಕೆಲಸ ಮಾಡುತ್ತಿದ್ದರು. ಈ ಯುವತಿಯನ್ನು ಮದುವೆಯಾಗಬೇಕು ಎಂದು ಹೇಳಿದ್ದ ಇನ್ನೊಬ್ಬ ಯುವಕನ ಮೇಲೆ ಈಗ ಪೊಲೀಸರಿಗೆ ಅನುಮಾನ ಉಂಟಾಗಿದ್ದು, ತನಿಖೆ ಮುಂದುವರಿದಿದೆ.


ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಸುತ್ತಮುತ್ತಲಿನ ಸ್ಥಳಗಳಲ್ಲಿನ ಸಿಸಿಟಿವಿ ಪರಿಶೀಲಿಸುತ್ತಿದ್ದು, ತನಿಖೆ ಆರಂಭಿಸಿದ್ದಾರೆ.

Join Whatsapp
Exit mobile version