ಬ್ರದರ್ ಸ್ವಾಮಿ ತನ್ನ ಪಟಾಲಂ ಬಳಸಿ ಸಿಡಿ ಹಂಚಿಸಿ ಈಗ ಪತಿವ್ರತೆ ನಾಟಕ ಆಡುತ್ತಿದ್ದಾರೆ: ಕಾಂಗ್ರೆಸ್

Prasthutha|

ಉತ್ತರಿಸು ಉತ್ತರ ಕುಮಾರ!

- Advertisement -

ಬೆಂಗಳೂರು: ಬ್ರದರ್ ಸ್ವಾಮಿ ತನ್ನ ಪಟಾಲಂ ಬಳಸಿ ಸಿಡಿ ಹಂಚಿಸಿ ಈಗ ಪತಿವ್ರತೆ ನಾಟಕ ಆಡುತ್ತಿದ್ದಾರೆ. ಹಾಸನದ ಟಿಕೆಟ್ ಹಂಚಿಕೆಯಿಂದ ಚುನಾವಣೆವರೆಗೆ ಒಳ ಆಟ ಆಡಿ ಈಗ ಮಾನ ಹರಾಜು ಆದಮೇಲೆ ಸತ್ಯ ಹರೀಶ್ಚಂದ್ರ ಪಾತ್ರಕ್ಕೆ ಬಣ್ಣ ಬಳಿದುಕೊಳ್ಳುತ್ತಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಹರಿಹಾಯ್ದಿದೆ.

Xನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, ಕರ್ನಾಟಕದಲ್ಲಿ ಸಿಡಿ ಜನಕ ಬ್ರದರ್ ಸ್ವಾಮಿ! ಮಗನ ಪಟ್ಟಾಭಿಷೇಕದ ಆಸೆಗಾಗಿ ಆರು ತಿಂಗಳು ಮುಂಚೆನೇ ಡೀಲ್ ವಕೀಲನ ಬಳಸಿಕೊಂಡು ಸಿಡಿ ಬ್ಲಾಕ್ಮೇಲ್ ಮಾಡಿದ ಕೀರ್ತಿ ಬ್ರದರ್ ಸ್ವಾಮಿಗೆ ಸೇರುತ್ತದೆ ಎಂದಿದೆ.

- Advertisement -

ತನ್ನ ಕುಟುಂಬದ ಅವಾಂತರ ತಡೆದು ಹೆಣ್ಣುಮಕ್ಕಳ ರಕ್ಷಣೆ ಮಾಡದ ಬ್ರದರ್ ಸ್ವಾಮಿ ತನ್ನ ಪಟಾಲಂ ಬಳಸಿ ಸಿಡಿ ಹಂಚಿಸಿ ಈಗ ಪತಿವ್ರತೆ ನಾಟಕ ಆಡುತ್ತಿದ್ದಾರೆ? ಹಾಸನದ ಟಿಕೆಟ್ ಹಂಚಿಕೆ ಇಂದ ಚುನಾವಣೆವರೆಗೆ ಒಳ ಆಟ ಆಡಿ ಈಗ ಮಾನ ಹರಾಜು ಆದಮೇಲೆ ಸತ್ಯ ಹರೀಶ್ಚಂದ್ರ ಪಾತ್ರಕ್ಕೆ ಬಣ್ಣ ಬಳಿದುಕೊಳ್ಳುತ್ತಿದ್ದಾರೆ! ಅಸೆಂಬ್ಲಿಯ ಫಲಿತಾಂಶಕ್ಕೆ ಮೊದಲೇ ಸಿಂಗಾಪುರದಲ್ಲಿ ಕುಳಿತು ಮುಖ್ಯಮಂತ್ರಿ ಕನಸು ಕಂಡ ಬ್ರದರ್ ಸ್ವಾಮಿ ಸಿಗದ ಕುರ್ಚಿಗಾಗಿ ಹತಾಶೆಗೊಂಡು ಏನೆಲ್ಲಾ ಮಾಡಿ ತನ್ನ ಅಣ್ಣನ ಮಗನಂತೆ ಬಯಲಾಗುತ್ತಿದ್ದಾರೆ? ಎಂದು ಪ್ರಶ್ನಿಸಿದೆ.

ಸಿಡಿ ಮಾಡಿದವರ SIT ಮುಂದೆ ನಿಲ್ಲಿಸಲು ಆಗದ ಬ್ರದರ್ ಸ್ವಾಮಿ ತನಿಖೆ ದಾರಿ ತಪ್ಪಿಸಲು ಅಧಿಕಾರಿಗಳ ಜರಿಯುತ್ತಿದ್ದಾರೆ. ಬ್ರದರ್ ಸ್ವಾಮಿ ನಿಮ್ಮ ಬಳಿ ಅಷ್ಟೊಂದು ಧಾಖಲೆ ಇದ್ದರೆ ನೀವೇ SIT ಗೆ ಪ್ರಮಾಣ ಪತ್ರ ನೀಡಿ ಸಾಕ್ಷಿ ಹೇಳಿ? ನೊಂದವರಿಗೆ ಸಾಂತ್ವನ ಹೇಳಿ. ಮನಃಸಾಕ್ಷಿ ಇದ್ದರೆ ನೊಂದವರ ಕ್ಷಮೆ ಕೇಳಿ ಎಂದು ಆಗ್ರಹಿಸಿದೆ.

ಪಲಾಯನ ಬಿಟ್ಟು ರಾಜ್ಯದ ಗೌರವ ಮಣ್ಣು ಪಾಲು ಮಾಡಿ ಹೆಣ್ಣುಮಕ್ಕಳ ಬಾಳಿಗೆ ಕಂಠಕವಾದ ನಿಮ್ಮ ಅಣ್ಣನ ಮಗನಿಗೆ ಬುದ್ದಿ ಕಲಿಸಿ ಮರ್ಯಾದೆ ಉಳಿಸಿಕೊಳ್ಳಿ. ನಿಮ್ಮ ಕುಟುಂಬದ ಒಳ ಜಗಳಕ್ಕೆ ರಾಜ್ಯದ ಹೆಣ್ಣುಮಕ್ಕಳ ಬದುಕಿನೊಂದಿಗೆ ಆಟವಾಡಿ ಈಗ ಪೆನ್ ಡ್ರೈವ್ ಹಂಚಿಕೆ ಹೆಸರಲ್ಲಿ ರಕ್ಷಣೆ ಪಡೆಯುವ ನಾಟಕ ಕೊನೆಗೊಳಿಸಿ ಮಹಾನ್ ಚಿತ್ರ ನಿರ್ಮಾಪಕ ಬ್ರದರ್ ಸ್ವಾಮಿ ಅವರೇ ಎಂದು ಕಾಂಗ್ರೆಸ್ ಹೇಳಿದೆ.

ದೀರ್ಘವಾಗಿ ಕುಮಾರಸ್ವಾಮಿಯನ್ನು ತೆಗೆದುಕೊಂಡ ಕರ್ನಾಟಕ ಕಾಂಗ್ರೆಸ್, ಉತ್ತರಿಸು ಉತ್ತರ ಕುಮಾರ ಎಂದು Xನಲ್ಲಿ ಕಿಡಿಗಾರಿದೆ.

Join Whatsapp
Exit mobile version