ಲಂಡನ್: ಇಸ್ಲಾಮಿಕ್ ಶರಿಯಾದಿಂದ ಪ್ರಭಾವಿತರಾಗಿ ಬ್ರಿಟಿಷ್ ಧಾರ್ಮಿಕ ಶಿಕ್ಷಣ ತಜ್ಞ ಹಾಗೂ ಪ್ರೊಫೆಸರ್ ಹೆನ್ರಿ ಬ್ರಿಯಾನ್ ಕ್ರಿಶ್ಚಿಯಾನಿಟಿಯನ್ನು ತೊರೆದು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದಾರೆ ಎಂದು ವರದಿಯಾಗಿದೆ.
ತಾನು ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವುದಾಗಿ ಘೋಷಿಸಿರುವ ಅವರು, ನನಗೆ ಮುಸ್ಲಿಂ ಆಗಲು ಈ ಅವಕಾಶವನ್ನು ನೀಡಿದ್ದಕ್ಕಾಗಿ ನಾನು ದೇವನಿಗೆ ತುಂಬಾ ಆಭಾರಿಯಾಗಿದ್ದೇನೆ ಎಂದು ಹೇಳಿದರು.
ಈ ಕುರಿತು ಪ್ರತಿಕ್ರಯಿಸಿರುವ ಹೆನ್ರಿಯ ಕಿರಿಯ ಸಹೋದರಿ, 24 ವರ್ಷದ ಕೇಟೀ ಶಾ, ನಾನು ಇನ್ನೂ ನಡೆದ ಘಟನೆಯಿಂದ ಆಘಾತಕ್ಕೊಳಗಾಗಿದ್ದೇನೆ, ಆದರೆ ಕಾಯುತ್ತಿರುವ ಹೊಸ ಸಾಹಸಕ್ಕಾಗಿ ಉತ್ಸುಕನಾಗಿದ್ದೇನೆ ಎಂದಿದ್ದಾರೆ.