Home ಟಾಪ್ ಸುದ್ದಿಗಳು ಕೋವಿಶೀಲ್ಡ್ ಅಮಾನ್ಯವೆಂದ ಬ್ರಿಟನ್ | ಎಚ್ಚರಿಕೆ ರವಾನಸಿದ ಭಾರತ

ಕೋವಿಶೀಲ್ಡ್ ಅಮಾನ್ಯವೆಂದ ಬ್ರಿಟನ್ | ಎಚ್ಚರಿಕೆ ರವಾನಸಿದ ಭಾರತ

ನವದೆಹಲಿ: ಪುಣೆಯ ಸೀರಮ್ ಇನ್ಸಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ಕೋವಿಶೀಲ್ಡ್ ಕೋವಿಡ್ ಲಸಿಕೆಯನ್ನು ಬ್ರಿಟನ್ ಅಮಾನ್ಯಗೊಳಿಸಿದ್ದು, ಅಲ್ಲದೇ ಕೋವಿಶೀಲ್ಡ್ ಲಸಿಕೆ ಪಡೆದು ಭಾರತದಿಂದ ಪ್ರಯಾಣಿಸುವ ಪ್ರಯಾಣಿಕರು ಖಡ್ಡಾಯ 10 ದಿನಗಳ ಕಾಲ ಪ್ರತ್ಯೇಕವಾಸದ ನಿಯಮವನ್ನು ಜಾರಿಗೊಳಿಸಿದೆ.

ಇನ್ನು ಬ್ರಿಟನ್ ನ ಆದೇಶವನ್ನು ಪ್ರತಿಕ್ರಿಯಿಸಿರುವ ಭಾರತ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ ಶೃಂಗ್ಲಾ ಈ ಆದೇಶ ಹಿಂಪಡೆಯದಿದ್ದರೆ ಅದಕ್ಕೆ ತಿರುಗೇಟು ನೀಡುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದಿದ್ದಾರೆ. ಅಲ್ಲದೇ ಈ ಆದೇಶವು ತಾರತಮ್ಯದಿಂದ ಕೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋವಿಶೀಲ್ಡ್ ಲಸಿಕೆ ಬ್ರಿಟನ್ ಪರವಾನಿಗೆಯೊಂದಿಗೆ ಭಾರತದಲ್ಲಿ ತಯಾರಾಗುತ್ತಿದೆ, ಈಗಾಗಲೇ ಬ್ರಿಟನ್ 50 ಲಕ್ಷ ಕೋವಿಶೀಲ್ಡ್ ಲಸಿಕೆಯನ್ನು ಭಾರತದಿಂದ ಆಮದು ಮಾಡಿಕೊಂಡಿದೆ. ಅಲ್ಲಿನ ನಾಗರಿಕರಿಗೆ ಕೋವಿಶೀಲ್ಡ್ ಲಸಿಕೆಯನ್ನು ನೀಡಲಾಗುತ್ತಿದೆಯಾರೂ ಭಾರತೀಯರು ಲಸಿಕೆ ಹಾಕಿಸಿಕೊಂಡರೆ ಅಮಾನ್ಯವೆನ್ನುವುದು ತಾರತಮ್ಯವಾಗುತ್ತದೆ ಎಂದು ಹೇಳಿದ್ದಾರೆ.

ಇದೇ ವಿಚಾರಕ್ಕೆ ಸಂಬಂಧಿಸಿ ವಿದೇಶಾಂಗ ಸಚಿವ ಜೈಶಂಕರ್ ಅವರು ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಎಲಿಜಬತ್ ಟ್ರಸ್ ಅವರೊಂದಿಗೆ ಅಮೆರಿಕಾದಲ್ಲಿ ಭೇಟಿಯಾಗಿ ಮಾತುಕತೆಯನ್ನೂ ನಡೆಸಲಿದ್ದಾರೆ.

Join Whatsapp
Exit mobile version