Home ಟಾಪ್ ಸುದ್ದಿಗಳು ಬ್ರಿಟನ್‌ ರಾಣಿ 2ನೇ ಎಲಿಜಬೆತ್‌ ಅಂತ್ಯಕ್ರಿಯೆ; ಭಾರತದ ಪರವಾಗಿ ರಾಷ್ಟ್ರಪತಿದ್ರೌಪದಿ ಮುರ್ಮು ಗೌರವ ನಮನ ಸಲ್ಲಿಕೆ

ಬ್ರಿಟನ್‌ ರಾಣಿ 2ನೇ ಎಲಿಜಬೆತ್‌ ಅಂತ್ಯಕ್ರಿಯೆ; ಭಾರತದ ಪರವಾಗಿ ರಾಷ್ಟ್ರಪತಿದ್ರೌಪದಿ ಮುರ್ಮು ಗೌರವ ನಮನ ಸಲ್ಲಿಕೆ

ಹೊಸದಿಲ್ಲಿ: ಬ್ರಿಟನ್‌ ರಾಣಿ 2ನೇ ಎಲಿಜಬೆತ್‌  ಅವರ  ಪಾರ್ಥಿವ ಶರೀರವನ್ನು ಇರಿಸಲಾಗಿರುವ ಲಂಡನ್ ನ ವೆಸ್ಟ್ ಮಿನ್ಸ್ಟರ್  ಹಾಲ್ ಗೆ  ರಾಷ್ಟ್ರಪತಿ ದ್ರೌಪದಿ ಮುರ್ಮು  ಹಾಗೂ ಹೈಕಮಿಷನರ್ ಸುಜಿತ್ ಘೋಷ್  ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದರು.ರಾಣಿಯವರ ಸ್ಮರಣೆಗಾಗಿ ಲಂಡನ್ ನ ಲ್ಯಾಂಕಾಸ್ಟರ್ ಹೌಸ್ ನಲ್ಲಿ ಇರಿಸಲಾಗಿರುವ ಸಂತಾಪ ಸೂಚಕ ಪುಸ್ತಕಕ್ಕೆ ಮುರ್ಮು ಸಹಿ ಹಾಕಿದರು.

ಮೂರು ದಿನದ  ಭೇಟಿಗಾಗಿ ಲಂಡನ್’ಗೆ  ತೆರಳಿರುವ ಮುರ್ಮು ಭಾನುವಾರ ತಡರಾತ್ರಿ ಬ್ರಿಟನ್‌ ನೂತನ ರಾಜ 3ನೇ ಚಾರ್ಲ್ಸ್‌ ಅವರನ್ನು ಬಂಕಿಂಗ್‌ಹ್ಯಾಮ್‌ ಅರಮನೆಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.

ಇಂದು ಬ್ರಿಟನ್‌ ಕಾಲಮಾನ ಬೆಳಿಗ್ಗೆ 11ಕ್ಕೆ ರಾಣಿ ಎಲಿಜಬೆತ್‌ 2 ಅವರ ಅಂತ್ಯಕ್ರಿಯೆ ವೆಸ್ಟ್ ಮಿನ್ಸ್ಟರ್ ಅಬೆಯಲ್ಲಿ ನಡೆಯಲಿದ್ದು. ಭಾರತದ ಪರವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಗೌರವ ನಮನ ಸಲ್ಲಿಸಿದ್ದಾರೆ.

Join Whatsapp
Exit mobile version