Home ಟಾಪ್ ಸುದ್ದಿಗಳು MSP ಕಾನೂನು ಜಾರಿಗೊಳಿಸದಿದ್ದರೆ ಗಣರಾಜ್ಯ ದಿನ ಮತ್ತೊಮ್ಮೆ ಪ್ರಬಲ ಪ್ರತಿಭಟನೆ: ಟಿಕಾಯತ್ ಎಚ್ಚರಿಕೆ

MSP ಕಾನೂನು ಜಾರಿಗೊಳಿಸದಿದ್ದರೆ ಗಣರಾಜ್ಯ ದಿನ ಮತ್ತೊಮ್ಮೆ ಪ್ರಬಲ ಪ್ರತಿಭಟನೆ: ಟಿಕಾಯತ್ ಎಚ್ಚರಿಕೆ

ಮುಂಬೈ: MSP ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೆ ತರದಿದ್ದಲ್ಲಿ ಗಣರಾಜ್ಯೋತ್ಸವ ದಿನದಂದು ಮತ್ತೊಂದು ಪ್ರಬಲ ಪ್ರತಿಭಟನೆಯನ್ನು ಎದುರಿಸಬೇಕಾದೀತು ಎಂದು ಭಾರತೀಯ ಕಿಸಾನ್ ಯೂನಿಯನ್(BKU) ನಾಯಕ ರಾಕೇಶ್ ಟಿಕಾಯತ್ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಮುಂಬೈ ನ ಆಝಾದ್ ಮೈದಾನದಲ್ಲಿ ನಡೆದ ಮಹಾಪಂಚಾಯತ್ ನ ನಂತರ ಸುದ್ದಿಗಾರರೊಂದಿಗೆ ಮಾತನಾಡಿರುವ ಟಿಕಾಯತ್, ರೈತರಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ ಪಿ) ಖಾತ್ರಿಪಡಿಸುವ ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೆ ತರಬೇಕು ಇಲ್ಲದೇ ಇದ್ದಲ್ಲಿ ಗಣರಾಜ್ಯೋತ್ಸವ ದಿನದಂದು ನಾಲ್ಕು ಲಕ್ಷ ಟ್ರಾಕ್ಟರ್ ಗಳನ್ನೊಳಗೊಂಡ ಮತ್ತೊಂದು ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಗಣರಾಜ್ಯೋತ್ಸವ ದಿನದಂದು ಎದುರಿಸಬೇಕು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.


ಗುಜರಾತ್ ನ ಮುಖ್ಯಮಂತ್ರಿಯಾಗಿದ್ದಾಗ MSPಯನ್ನು ಬೆಂಬಲಿಸುತ್ತಿದ್ದ ಮೋದಿಯವರು ಈಗ ಕಾನೂನಿನ ಬಗ್ಗೆ ಚರ್ಚೆಯಿಂದ ತಪ್ಪಿಸುತ್ತಿದ್ದಾರೆ ಎಂದು ಟಿಕಾಯತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Whatsapp
Exit mobile version