Home ಟಾಪ್ ಸುದ್ದಿಗಳು ರೇಪ್ ಕೇಸ್ ಆರೋಪಿ ಬೆಂಗಳೂರು ಕಂಬಳಕ್ಕೆ ಅತಿಥಿ!

ರೇಪ್ ಕೇಸ್ ಆರೋಪಿ ಬೆಂಗಳೂರು ಕಂಬಳಕ್ಕೆ ಅತಿಥಿ!

►ಕಾಂಗ್ರೆಸ್ ಶಾಸಕರ ನೇತೃತ್ವದ ಕಂಬಳಕ್ಕೆ ವಿವಾದಿತ ಬಿಜೆಪಿ ಸಂಸದ ಬ್ರಿಜ್ ಭೂಷಣ್

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ‌ ಇದೇ ಮೊದಲ ಬಾರಿಗೆ ಕಂಬಳ ನಡೆಯುತ್ತಿದ್ದು, ಬಹಳ ಅದ್ಧೂರಿಯಾಗಿರಲಿದೆ. ನವೆಂಬರ್ 25 ಮತ್ತು 26 ರಂದು ಎರಡು ದಿನಗಳ ಕಂಬಳ ಕಾರ್ಯಕ್ರಮಕ್ಕೆ ಕುಖ್ಯಾತ ಲೈಂಗಿಕ ಕಿರುಕುಳ ಪ್ರಕರಣಗಳ ಆರೋಪಿ, ಬಿಜೆಪಿ ಸಂಸದ ಬ್ರಿಜ್ ಭೂಷಣ್‌ ಶರಣ್ ಸಿಂಗ್‌ನ್ನು ಅತಿಥಿಯಾಗಿ ಆಹ್ವಾನಿಸಲಾಗಿದೆ.

ಆರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪವನ್ನು ಬ್ರಿಜ್‌ ಭೂಷಣ್ ಎದುರಿಸುತ್ತಿದ್ದಾರೆ. ಈ‌ ಬಗ್ಗೆ ಮಹಿಳಾ ಕುಸ್ತಿಪಟುಗಳು ಬಹಿರಂಗ ಕಣ್ಣೀರು ಹಾಕಿದ್ದು ಕೂಡ ನಡೆದಿದೆ. ಇಂತಹ ಅನೇಕ ಗಂಭೀರ ಅಪರಾಧ ಪ್ರಕರಣಗಳು ಬ್ರಿಜ್ ಭೂಷಣ್ ಮೇಲಿವೆ. ಅಂತಹ ವ್ಯಕ್ತಿಯನ್ನು ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಹ್ವಾನಿಸಿದ ಬೆಂಗಳೂರು ಕಂಬಳ ಸಮಿತಿಯ ನಡೆಯು ಚರ್ಚೆಗೆ ಗ್ರಾಸವಾಗಿದೆ.

ಕರ್ನಾಟಕ ಸರ್ಕಾರ ಕೂಡ ಈ ಕಂಬಳಕ್ಕಾಗಿ ಒಂದು ಕೋಟಿ ರೂ. ಘೋಷಣೆ ಮಾಡಿದೆ. ಕಂಬಳ ಸಮಿತಿಯ ಬೇಡಿಕೆಯನುಸಾರ ಈ ಆಹ್ವಾನ ಎಂದು ಕಂಬಳ ಸಮಿತಿ ಅಧ್ಯಕ್ಷ ಮತ್ತು ಶಾಸಕ ಅಶೋಕ್ ರೈ ತಿಳಿಸಿದ್ದು, ಲೈಂಗಿಕ ಕಿರುಕುಳ ಮತ್ತು ಇತರ ಪ್ರಕರಣದ ಆರೋಪಿಗೆ ಹೀಗೆ ಅಂಗೀಕಾರ ಕೊಡುವುದು ಸರಿಯೇ ಎಂದು ನಾಗರಿಕ ವಲಯದಿಂದ ಆಕ್ಷೇಪ ಕೇಳಿಬಂದಿದೆ.

Join Whatsapp
Exit mobile version