ಆಂಬ್ಯುಲೆನ್ಸ್’ನಲ್ಲಿ ವಧು-ವರನ ‘ದಿಬ್ಬಣ’: ಚಾಲಕನ ಲೈಸೆನ್ಸ್ ರದ್ದು !

Prasthutha: January 12, 2022

ಆಲಪ್ಪುಝ: ರೋಗಿಗಳ ಪ್ರಾಣ ಉಳಿಸಲು ಬಳಸಬೇಕಾಗಿದ್ದ ಆಂಬ್ಯುಲೆನ್ಸ್’ನಲ್ಲಿ ವಧು-ವರನ ಜೊತೆಗೆ ಸ್ನೇಹಿತರು ಡ್ಯಾನ್ಸ್ ಮಾಡುತ್ತಾ, ಸೈರನ್ ಮೊಳಗಿಸುತ್ತಾ ವೇಗವಾಗಿ ಸಾಗುವ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೇರಳದ ಆಲಪ್ಪುಝ ಜಿಲ್ಲೆಯ ಕಟ್ಟಾನಂ ಎಂಬಲ್ಲಿ ಈ ಅತಿರೇಕದ ಘಟನೆ ನಡೆದಿದೆ.

ಆಂಬ್ಯುಲೆನ್ಸ್ ದುರ್ಬಳಕೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಲೇ ಕ್ರಮಕ್ಕೆ ಮುಂದಾಗಿರುವ ಕೇರಳ ಮೋಟಾರು ವೆಹಿಕಲ್ ವಿಭಾಗ, MVD ಅಧಿಕಾರಿಗಳು, ವಧು-ವರ ಪ್ರಯಾಣಿಸಿದ ಆಂಬ್ಯುಲೆನ್ಸ್’ಅನ್ನು ವಶಕ್ಕೆ ಪಡೆದಿದ್ದು, ಮಾಲೀಕನಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಮತ್ತೊಂದೆಡೆ ಚಾಲಕನ ಲೈಸೆನ್ಸ್’ಅನ್ನು ರದ್ದುಗೊಳಿಸಲು ಶಿಫಾರಸು ಮಾಡಲಾಗಿದೆ. ಚಾಲಕ ಹಾಗೂ ಮಾಲೀಕನ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾದೇಶಕ ಸಾರಿಗೆ ಅಧಿಕಾರಿ ಸಜಿ ಪ್ರಸಾದ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕಟ್ಟಾನಂನ ಖಾಸಗಿ ಆಸ್ಪತ್ರೆಯ ಸಿಬ್ಬಂದಿಯಾಗಿರುವ ವರ, ವಧುವಿನ ಮನೆಗೆ ಆಂಬ್ಯುಲೆನ್ಸ್’ನಲ್ಲಿ ಬಂದಿಳಿಯುವ ವೀಡಿಯೋ ಕೇರಳದಲ್ಲಿ ವೈರಲ್ ಆಗಿತ್ತು. ಆಂಬ್ಯುಲೆನ್ಸ್ ಮಾಲೀಕರ ಸಂಘದ ಪದಾಧಿಕಾರಿಗಳು ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಸೂಕ್ತ ಕ್ರಮಕ್ಕೆ ಒತ್ತಾಯಿಸಿ ದೂರು ದಾಖಲಿಸಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!