Home ಮಲೆನಾಡು ಬ್ರೇಕ್ ವೈಫಲ್ಯ: ಜೆಸಿಬಿ ಅಡಿಗೆ ಸಿಲುಕಿ ಕಾರ್ಮಿಕ ದುರ್ಮರಣ

ಬ್ರೇಕ್ ವೈಫಲ್ಯ: ಜೆಸಿಬಿ ಅಡಿಗೆ ಸಿಲುಕಿ ಕಾರ್ಮಿಕ ದುರ್ಮರಣ

ಮಡಿಕೇರಿ: ಬ್ರೇಕ್ ಫೇಲ್ ಆಗಿ  ಹಿಮ್ಮುಖವಾಗಿ ಚಲಿಸಿದ ಜೆಸಿಬಿಯಡಿಗೆ ಸಿಲುಕಿ ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ಮಡಿಕೇರಿಯ ಕೂಟು ಹೊಳೆ ಬಳಿ ನಡೆದಿದೆ.  ಹಾಸನ ಮೂಲದ ಕಾರ್ಮಿಕ ಸಂತೋಷ್ (22) ಮೃತ ಕಾರ್ಮಿಕ ಎಂದು ಗುರುತಿಸಲಾಗಿದೆ.

ಜೆಸಿಬಿಯ ಬ್ರೇಕ್ ವಿಫಲಗೊಂಡು ಇಳಿಜಾರಿನಲ್ಲಿ ಹಿಮ್ಮುಖವಾಗಿ ಚಲಿಸಿದೆ. ಈ ಸಂದರ್ಭ ಕಾರ್ಮಿಕ ಸೊಂತೋಷ್ ಜೆಸಿಬಿಯಡಿಗೆ ಸಿಲುಕಿ ಸ್ಥಳದಲ್ಲೆ ಮೃತಪಟ್ಟಿದಾರೆ. ಅಪಘಾತದ ತೀವ್ರತೆಗೆ ಕಾರ್ಮಿಕನ ಒಂದು ಕಾಲು ದೇಹದಿಂದ ಬೇರ್ಪಟ್ಟಿದೆ.  ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Join Whatsapp
Exit mobile version