“ಬ್ರಾಹ್ಮಣರೇ ಭಾರತ ಬಿಟ್ಟು ತೊಲಗಿ”: ಜೆಎನ್’ಯು ಕ್ಯಾಂಪಸ್ ಗೋಡೆಗಳ ಮೇಲೆ ಬರಹ

Prasthutha|

ನವದೆಹಲಿ: ದೆಹಲಿಯ ಜವಾಹರಲಾಲ್ ನೆಹರೂ ಕ್ಯಾಂಪಸ್ ನ ಹಲವಾರು ಗೋಡೆಗಳ ಮೇಲೆ ಬ್ರಾಹ್ಮಣ ವಿರೋಧಿ ಘೋಷಣೆಗಳನ್ನು ಬರೆಯಲಾಗಿದ್ದು, ಬ್ರಾಹ್ಮಣರೇ ಭಾರತ ಬಿಟ್ಟು ತೊಲಗಿ, ಬ್ರಾಹ್ಮಣರೇ ಕ್ಯಾಂಪಸ್ ಬಿಟ್ಟು ತೊಲಗಿ ಎಂದು ಕೆಂಪು ಅಕ್ಷರಗಳಲ್ಲಿ ಬರೆಯಲಾಗಿದೆ.

- Advertisement -


“ಬ್ರಾಹ್ಮಣರು ಕ್ಯಾಂಪಸ್ ತೊರೆಯಿರಿ”, “ರಕ್ತವಿದೆ”, “ಬ್ರಾಹ್ಮಣ ಭಾರತ್ ಛೋಡೋ” ಮತ್ತು “ಬ್ರಾಹ್ಮಿನೋ-ಬನಿಯಾಸ್, ನಾವು ನಿಮಗಾಗಿ ಬರುತ್ತಿದ್ದೇವೆ! ನಾವು ಸೇಡು ತೀರಿಸಿಕೊಳ್ಳುತ್ತೇವೆ” ಎಂದು ಬರೆಯಲಾಗಿದೆ.

ಜೆಎನ್ ಯು ಕ್ಯಾಂಪಸಿನ ಗೋಡೆಗಳಲ್ಲಿ ಬ್ರಾಹ್ಮಣ ವಿರೋಧಿ ಗೋಡೆ ಬರಹಗಳು ಗುರುವಾರ ಕಾಣಿಸಿಕೊಂಡಿವೆ. ಸ್ಕೂಲ್ ಇಂಟರ್ ನ್ಯಾಷನಲ್ ಸ್ಟಡೀಸ್ ಕಟ್ಟಡದ ಗೋಡೆಗಳು ಮುಖ್ಯವಾಗಿ ಬ್ರಾಹ್ಮಣ ಬನಿಯಾ ವಿರುದ್ಧದ ಗೋಡೆ ಬರಹಗಳು ಕಾಣಿಸಿವೆ. ಈ ಬಗ್ಗೆ ಸದರಿ ಕಟ್ಟಡದ ಉಸ್ತುವಾರಿಯವರು ತನಿಖೆ ನಡೆಸಿ ಉಪ ಕುಲಪತಿ ಶಾಂತಿಶ್ರೀ ಡಿ. ಪಂಡಿತ್ ಗೆ ವರದಿ ನೀಡುವಂತೆ ವಿವಿ ಆಡಳಿತವು ಆದೇಶಿಸಿದೆ.

- Advertisement -

ಬ್ರಾಹ್ಮಣರೇ ಕ್ಯಾಂಪಸ್ ತೊರೆಯಿರಿ.

ಅಲ್ಲಿ ನೆತ್ತರು ಇರಲಿದೆ.

ಬ್ರಾಹ್ಮಣರೇ ಭಾರತ ಬಿಡಿ.

ಬ್ರಾಹ್ಮಣ, ಬನಿಯಾರೆ ನಾವು ನಿಮಗಾಗಿ ಬರುತ್ತಿದ್ದೇವೆ, ನಾವು ಸೇಡು ತೀರಿಸಿಕೊಳ್ಳುತ್ತೇವೆ ಎಂದು ಇಂಗ್ಲಿಷ್ ನಲ್ಲಿ ಗೋಡೆ ಬರಹಗಳನ್ನು ಬರೆಯಲಾಗಿದೆ.

ಜೆಎನ್ ಯು ಆಡಳಿತವು ಇದನ್ನು ಖಂಡಿಸಿ, ವಿವಿ ಎಲ್ಲರಿಗೂ ಸೇರಿದೆ ಎಂದು ಹೇಳಿಕೆ ನೀಡಿದೆ. “ಸ್ಕೂಲ್ ಆಫ್ ಇಂಟರ್ ನ್ಯಾಷನಲ್ ಸ್ಟಡೀಸ್ ನ ಡೀನ್ ಮತ್ತು ದೂರು ದುಮ್ಮಾನ ಸಮಿತಿಗೆ ತನಿಖೆ ನಡೆಸಿ ಉಪಕುಲಪತಿಗೆ ಕೂಡಲೆ ವರದಿ ಸಲ್ಲಿಸಬೇಕು. ಜೆಎನ್ ಯು ಸಮಾನತೆಗಾಗಿ ಇದೆ.” ಎಂದು ಆಡಳಿತ ಮಂಡಳಿ ಹೇಳಿದೆ.

Join Whatsapp
Exit mobile version