Home ಟಾಪ್ ಸುದ್ದಿಗಳು ಬ್ರಹ್ಮಾವರ ಕೃಷಿ ಸಂಶೋಧನಾ ಕೇಂದ್ರವನ್ನು ಕೃಷಿ ವಿ.ವಿ. ಮಾಡಲು ಪ್ರಯತ್ನ: ಸುನೀಲ್ ಕುಮಾರ್

ಬ್ರಹ್ಮಾವರ ಕೃಷಿ ಸಂಶೋಧನಾ ಕೇಂದ್ರವನ್ನು ಕೃಷಿ ವಿ.ವಿ. ಮಾಡಲು ಪ್ರಯತ್ನ: ಸುನೀಲ್ ಕುಮಾರ್

ಬೆಂಗಳೂರು; ಕರಾವಳಿ ಭಾಗದಲ್ಲಿ ಕೃಷಿ ಚಟುವಟಿಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕಿದೆ. ಈ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರದ ಸಂಶೋಧನಾ ಕೇಂದ್ರವನ್ನು ಮುಂದಿನ ದಿನಗಳಲ್ಲಿ ಕೃಷಿ ವಿಶ್ವವಿದ್ಯಾಲಯವನ್ನಾಗಿ ಮಾಡಲು ಸರ್ಕಾರಕ್ಕೆ ಮನವಿ ಮಾಡುವುದಾಗಿ ಇಂಧನ ಸಚಿವ ವಿ.ಸುನೀಲ್‌ಕುಮಾರ್ ಹೇಳಿದ್ದಾರೆ.


ಬ್ರಹ್ಮಾವರದಲ್ಲಿಂದು “ಕೃಷಿ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಸುಮಾರು ೩೫೦ ಎಕರೆ ಜಾಗ ಇರುವಂತಹ ಈ ಪ್ರದೇಶದಲ್ಲಿ ಕೃಷಿ ಮಹಾವಿದ್ಯಾಲಯ ನಿರ್ಮಾಣವಾದರೆ ಉಡುಪಿ, ದಕ್ಷಿಣಕನ್ನಡ ಜಿಲ್ಲೆಗಳ ಉತ್ತಮ ಕೃಷಿ ವಿಜ್ಞಾನ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಹಾಗೂ ಕೃಷಿ ಸಚಿವರಲ್ಲಿ ಚರ್ಚಿಸುವುದಾಗಿ ಅವರು ತಿಳಿಸಿದರು.


ಕೊರೊನಾದಿಂದಾಗಿ ಬೇರೆ ಎಲ್ಲಾ ಕ್ಷೇತ್ರಗಳಿಗೆ ನಷ್ಟ ಆಗಿದೆ. ಆದರೆ, ಕೃಷಿ ಕ್ಷೇತ್ರ ತನ್ನ ವ್ಯಾಪಕತೆಯನ್ನು ವಿಸ್ತರಿಕೊಳ್ಳುತ್ತ ಹೆಚ್ಚು ಹೆಚ್ಚು ಜನರು ಕೃಷಿಯ ಕಡೆಗೆ ಒಲವು ತೋರಿರುವುದನ್ನು ಗಮನಿಸಿದ್ದೇವೆಂದು ಸಚಿವರು ಹೇಳಿದರು.

Join Whatsapp
Exit mobile version