ಸ್ನೇಹಿತನ ಜೊತೆ ಸೇರಿಕೊಂಡು ಪ್ರೀತಿಸಿದ ಹುಡುಗಿಯ ಮೇಲೆ ಅತ್ಯಾಚಾರ ಮಾಡಿದ ಪ್ರಿಯಕರ

Prasthutha|

ಬೆಂಗಳೂರು: ಸ್ನೇಹಿತನ ಜೊತೆ ಸೇರಿಕೊಂಡು ಪ್ರಿಯಕರನೇ ತನ್ನ ಪ್ರಿಯತಮೆಯನ್ನು ಅತ್ಯಾಚಾರ ಮಾಡಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.

- Advertisement -


ಪುರುಷೋತ್ತಮ್ ಹಾಗೂ ಚೇತನ್ ಆರೋಪಿಗಳು.


ಮೂಲತಃ ತುಮಕೂರಿನ ನಿವಾಸಿಯಾಗಿರುವ ಯುವತಿ, ಪ್ಯಾರಾ ಮೆಡಿಕಲ್ ಓದುತ್ತಿದ್ದಳು. ಈಕೆ ಹಾಗೂ ತುಮಕೂರಿನ ಕೊರಟಗೆರೆ ನಿವಾಸಿ ಪುರುಷೋತ್ತಮ್ ಕಳೆದ 1 ವರ್ಷದಿಂದ ಪರಸ್ಪರ ಪೀತಿಸುತ್ತಿದ್ದರು. ಯುವತಿಯನ್ನು ಪುರುಷೋತ್ತಮ್ ಗಿರಿನಗರದ ತನ್ನ ಸ್ನೇಹಿತ ಚೇತನ್ ಮನೆಗೆ ಕರೆದುಕೊಂಡು ಬಂದಿದ್ದ. ಬಳಿಕ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ನಂತರ ತನ್ನ ಸ್ನೇಹಿತ ಚೇತನ್ ನ ಘಟನಾ ಸ್ಥಳಕ್ಕೆ ಕರೆಸಿಕೊಂಡಿದ್ದಾನೆ. ಬಳಿಕ ಪುರುಷೋತ್ತಮ್ ಹಾಗೂ ಆತನ ಗೆಳೆಯ ಚೇತನ್ ಇಬ್ಬರೂ ಸೇರಿ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ಯುವತಿಯ ಚೀರಾಟಕ್ಕೆ ಅಕ್ಕಪಕ್ಕದ ಮೆನೆಯವರು ಬಂದಿದ್ದಾರೆ. ಕೂಡಲೇ ಸ್ಥಳೀಯರು ಗಿರಿನಗರ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಸದ್ಯ ಯುವತಿಯನ್ನ ರಕ್ಷಣೆ ಮಾಡಿ, ಆರೋಪಿಗಳಾದ ಚೇತನ್ ಹಾಗೂ ಪುರುಷೋತ್ತಮ್ನನ್ನು ಪೊಲೀಸರು ಬಂಧಿಸಿದ್ದಾರೆ.

Join Whatsapp
Exit mobile version