Home ಟಾಪ್ ಸುದ್ದಿಗಳು ಪ್ರೀತಿಸಿದ ಹುಡುಗಿಗೆ ನಿಶ್ಚಿತಾರ್ಥದ ಬೆನ್ನಲ್ಲೇ ಪ್ರಿಯಕರನ ಆತ್ಮಹತ್ಯೆ: ವಿಷಯ ತಿಳಿದು ಯುವತಿಯೂ ನೇಣಿಗೆ ಶರಣು

ಪ್ರೀತಿಸಿದ ಹುಡುಗಿಗೆ ನಿಶ್ಚಿತಾರ್ಥದ ಬೆನ್ನಲ್ಲೇ ಪ್ರಿಯಕರನ ಆತ್ಮಹತ್ಯೆ: ವಿಷಯ ತಿಳಿದು ಯುವತಿಯೂ ನೇಣಿಗೆ ಶರಣು

ಬೀದರ್: ಮನೆಯವರು ಮದುವೆಗೆ ನಿರಾಕರಿಸಿದ್ದಕ್ಕೆ ಮನನೊಂದು ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಗಾಂಧಿಗಂಜ್ ನಲ್ಲಿ ಕಳೆದ ರಾತ್ರಿ ನಡೆದಿದೆ.

ಗಾಂಧಿಗಂಜ್ ನ ಲಾಡಗೇರಿ ಬಡಾವಣೆಯ ಶರತ್ (28) ಹಾಗೂ ಸಂಗೀತಾ (26) ಆತ್ಮಹತ್ಯೆಗೆ ಶರಣಾದವರು.

ಇಬ್ಬರು ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಸಂಗೀತಾ ನಿಶ್ಚಿತಾರ್ಥ ಬೇರೊಂದು ಹುಡುಗನ ಜತೆ ನಡೆದಿತ್ತು. ಶೀಘ್ರದಲ್ಲಿ ಮದುವೆ ಸಹ ನಡೆಯಬೇಕಿತ್ತು.

ಇದರಿಂದ ಮನನೊಂದು ಶರತ್ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದ. ಪ್ರಿಯಕರನ ಸಾವಿನ ಸುದ್ದಿ ಕೇಳಿ ಸಂಗೀತಾ ತನ್ನ ಮನೆಯಲ್ಲಿನ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಘಟನೆಯಯಿಂದ ಎರಡು ಕುಟುಂಗಳ ಸದಸ್ಯರು ಕಂಗಾಲಾಗಿದ್ದಾರೆ. ಗಾಂಧಿಗಂಜ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp
Exit mobile version