ರಾಂಚಿ: ‘ಬಚ್‌ಪನ್ ಕಾ ಪ್ಯಾರ್’ ಖ್ಯಾತಿಯ ಬಾಲಕ ಸಹದೇವ್ ದಿರಾಡೊಗೆ ರಸ್ತೆ ಅಪಘಾತವಾಗಿ ಗಂಭೀರ ಗಾಯಗೊಂಡಿರುವ ಘಟನೆ ಛತ್ತೀಸ್ ಗಢದ ಸುಕ್ಮಾ ಜಿಲ್ಲೆಯಲ್ಲಿ ಸಂಭವಿಸಿದೆ.
ಸಹದೇವ್ ದಿರಾಡೊ ವೀಡಿಯೋ ಮೂಲಕ ದೇಶಾದ್ಯಂತ ಮನೆಮಾತಾಗಿದ್ದ. ಮಂಗಳವಾರ ರಾತ್ರಿ ಸಹದೇವ್ ತನ್ನ ತಂದೆಯ ಜತೆಗೆ ಮೋಟರ್ ಸೈಕಲ್ ನಲ್ಲಿ ತನ್ನ ಗ್ರಾಮಕ್ಕೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಸಹದೇವ್ ತಲೆಗೆ ಗಂಭೀರ ಗಾಯಗಳಾಗಿರುವುದರಿಂದ ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.