ಟಿವಿ ಸ್ಫೋಟಗೊಂಡು ಬಾಲಕ ಮೃತ್ಯು: ಮೂವರಿಗೆ ಗಾಯ

Prasthutha|

ಗಾಜಿಯಾಬಾದ್: ಟಿವಿ ಸ್ಫೋಟಗೊಂಡ ಪರಿಣಾಮ 16 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದು, ಆತನ ತಾಯಿ, ಅತ್ತಿಗೆ ಹಾಗೂ ಸ್ನೇಹಿತ ಗಂಭೀರ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಗಾಝಿಯಾಬಾದ್ ನಲ್ಲಿ ನಡೆದಿದೆ.

- Advertisement -

ಮೃತ ಬಾಲಕನನ್ನು ಓಮೇಂದ್ರ ಕುಮಾರ್(16) ಎಂದು ಗುರುತಿಸಲಾಗಿದ್ದು, ಟಿವಿಯ ಚೂರುಗಳು ಸಿಡಿದು ಆತನ ಮುಖ, ಎದೆ ಮತ್ತು ಕುತ್ತಿಗೆಗೆ ಗಾಯಗಳಾಗಿವೆ. ಆತನ ಸ್ನೇಹಿತ ಕರಣ್ (16) ಅವರಿಗೂ ಇದೇ ರೀತಿಯ ಗಾಯಗಳಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಬಾಲಕನ ತಾಯಿ ಓಂವತಿ (50) ಹಾಗೂ ಅತ್ತಿಗೆ ಮೋನಿಕಾ ಕೂಡ ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ. ಇವರನ್ನು ದೆಹಲಿಯ ಜಿಟಿಬಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಧ್ಯಾಹ್ನ ಮನೆಯಲ್ಲಿ ಊಟ ಮಾಡುವಾಗ ಓಮೇಂದ್ರ ಮತ್ತು ಕರಣ್ ಸಿನಿಮಾ ವೀಕ್ಷಿಸುತ್ತಿದ್ದಾಗ ಈ ಘಟನೆ ನಡೆದಿದೆ. ಸ್ಫೋಟದ ಪರಿಣಾಮವು ಎಷ್ಟು ಪ್ರಬಲವಾಗಿತ್ತೆಂದರೆ, ಗೋಡೆಯ ಒಂದು ಭಾಗವು ಮೋನಿಕಾ ಮೇಲೆ ಕುಸಿದಿದ್ದರೆ, ಕಟ್ಟಡದ ಬದಿಯ ಗೋಡೆಗೂ ಹಾನಿಯಾಗಿದೆ ಎಂದು ಟಿಲಾ ಮೋರ್ ಪೊಲೀಸ್ ಠಾಣೆಯ ಎಸ್ಎಚ್ಒ ಭುವನೇಶ್ವರ್ ಕುಮಾರ್ ಹೇಳಿದ್ದಾರೆ.

Join Whatsapp