ಟೋಕಿಯೋ 2020: ಬಾಕ್ಸರ್ ಮೇರಿ ಕೋಮ್ ಗೆಲುವಿನ ಪಂಚ್

Prasthutha|

ಟೋಕಿಯೋ (ಜು.25): ಭಾರತದ ಅನುಭವಿ ಬಾಕ್ಸರ್, ಆರು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್‌ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದ ಮೊದಲ ಪಂದ್ಯದಲ್ಲಿ ಡೊಮಿನಿಕ್‌ ರಿಪಬ್ಲಿಕ್‌ ನ ಮಿಗುಲಿನ ಹೆರ್ನಾಂಡೀಜ್‌ ಎದುರು 4-1 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಪ್ರೀಕ್ವಾರ್ಟರ್‌ ಫೈನಲ್‌ ಗೆ ಲಗ್ಗೆಯಿಟ್ಟಿದ್ದಾರೆ.

- Advertisement -

38 ವರ್ಷದ ಮೇರಿ ಕೋಮ್ ತನಗಿಂತ 15 ವರ್ಷ ಕಡಿಮೆ ಹರೆಯದ ಡೊಮಿನಿಕನ್ ಸ್ಪರ್ಧಿಯ ವಿರುದ್ಧ ಸೆಣಸಾಡಿದರು. ಆರಂಭದಿಂದ ಅಂತ್ಯದವರೆಗೆ ಭಾರೀ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಮೇರಿ ಕೋಮ್ ತಮ್ಮ ಅದ್ಭುತ ಪಟ್ಟುಗಳನ್ನು ಪ್ರದರ್ಶಿಸಿದರು.

ಮೊದಲ ಸುತ್ತಿನಲ್ಲಿ ಮೇರಿ ಕೋಮ್ 3-2 ಅಂತರದಲ್ಲಿ ಮುನ್ನಡೆ ಸಾಧಿಸಿದ್ದರು. ಇನ್ನು ಎರಡನೇ ಸುತ್ತಿನ ಹೋರಾಟದಲ್ಲೂ ಮೇರಿ ಮತ್ತೆ 3-2ರ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು. ಮೂರನೇ ಸುತ್ತಿನ ಕದನದಲ್ಲೂ ಬಲಿಷ್ಠ ಪಂಚ್‌ ಗಳ ಮೂಲಕ ಆಕ್ರಮಣಕಾರಿ ರಣತಂತ್ರ ರೂಪಿಸಿಕೊಂಡ ಮೇರಿ ಎದುರಾಳಿಗೆ ಮೇಲುಗೈ ಸಾಧಿಸಲು ನೀಡಲಿಲ್ಲ. ಅಂತಿಮವಾಗಿ ಮೇರಿ ಮೇರಿ 4-1 ಅಂತರದಲ್ಲಿ ಜಯ ಸಾಧಿಸುವಲ್ಲಿ ಯಶಸ್ವಿಯಾದರು.

- Advertisement -

2012ರ ಲಂಡನ್ ಒಲಿಂಪಿಕ್ಸ್‌ ಪದಕ ವಿಜೇತೆ ಮೇರಿ ಕೋಮ್‌ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಮತ್ತೊಮ್ಮೆ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದಾರೆ

Join Whatsapp