ವೆಂಟಿಲೇಟರ್ ಮತ್ತು ಪ್ರಧಾನಿ ಮೋದಿ ಇಬ್ಬರೂ ವಿಫಲರಾಗಿದ್ದಾರೆ : ರಾಹುಲ್ ಗಾಂಧಿ

Prasthutha|

ಕೋವಿಡ್ ನಿರ್ವಹಣೆಯ ಕುರಿತು ಮೋದಿ ಸರ್ಕಾರಕ್ಕೆ ಪ್ರತೀ ಬಾರಿ ಮುನ್ನೆಚ್ಚರಿಕೆ ನೀಡುತ್ತಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಸರ್ಕಾರದ ವೈಫಲ್ಯಗಳನ್ನು ಸಹ ಅಷ್ಟೇ ಕಟುವಾಗಿ ಟೀಕಿಸುತ್ತಿದ್ದಾರೆ. ಇದಕ್ಕೆ ಹೊಸ ಸೇರ್ಪಡೆಯಾಗಿ ಪಿಎಂ ಕೇರ್ಸ್‌ನಿಂದ ಖರೀದಿಸಲ್ಪಟ್ಟ ವೆಂಟಿಲೇಟರ್‌ಗಳು ಮತ್ತು ಪ್ರಧಾನ ಮಂತ್ರಿ ಇಬ್ಬರೂ ತಮ್ಮ ಕೆಲಸ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

- Advertisement -


ಕಳೆದ ವರ್ಷ ಕೋವಿಡ್ ಮೊದಲ ಅಲೆ ಕಾಣಿಸಿಕೊಂಡಾಗ ಸಾವಿರಾರು ಕೋಟಿ ರೂ ಪಿಎಂ ಕೇರ್ಸ್‌ಗೆ ದೇಣಿಗೆಯಾಗಿ ಬಂದಿತ್ತು. ಅದರಲ್ಲಿ ನೂರಾರು ವೆಂಟಿಲೇಟರ್‌ಗಳನ್ನು ಖರೀದಿಸಿ ರಾಜ್ಯಗಳ ಆಸ್ಪತ್ರೆಗಳಿಗೆ ಕಳಿಸಿಕೊಡಲಾಗಿತ್ತು. ಅವುಗಳಲ್ಲಿ ಬಹುತೇಕ ತಾಂತ್ರಿಕ ಕಾರಣದಿಂದ ಕಾರ್ಯನಿರ್ವಹಿಸುತ್ತಿಲ್ಲ ಎಂದು ವರದಿಯಾಗಿತ್ತು. ಈ ಕುರಿತು ಆಡಿಟ್ ಮತ್ತು ತನಿಖೆ ನಡೆಸುವಂತೆ ಮೋದಿ ನಿರ್ದೇಶಿಸಿದ್ದರು.


ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ “ಪ್ರಧಾನಿಗೂ ಪಿಎಂ ಕೇರ್ಸ್‌ನಿಂದ ಖರೀದಿಸಲ್ಪಟ್ಟ ವೆಂಟಿಲೇಟರ್‌ಗಳಿಗೂ ಹಲವಾರು ಸಾಮ್ಯತೆಗಳಿವೆ. ಎರಡಕ್ಕೂ ಅತಿಯಾದ ಸುಳ್ಳು ಪ್ರಚಾರ ನೀಡಲಾಯಿತು, ಈ ಎರಡೂ ತಮ್ಮ ಕೆಲಸ ಮಾಡುವಲ್ಲಿ ವಿಫಲವಾಗಿವೆ ಮತ್ತು ಅಗತ್ಯವಿದ್ದಾಗ ಈ ಎರಡನ್ನು ಹುಡುಕುವುದು ಕಷ್ಟ” ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.

Join Whatsapp