Home ಕರಾವಳಿ ನಾಳೆ ಪುಸ್ತಕ ಬಿಡುಗಡೆ ಮತ್ತು ‘ಕುವೆಂಪು ಬಂಟಮಲೆ ಪ್ರಶಸ್ತಿ’ ಪ್ರದಾನ

ನಾಳೆ ಪುಸ್ತಕ ಬಿಡುಗಡೆ ಮತ್ತು ‘ಕುವೆಂಪು ಬಂಟಮಲೆ ಪ್ರಶಸ್ತಿ’ ಪ್ರದಾನ

ಮಂಗಳೂರು: ಕರ್ನಾಟಕ ಅಧ್ಯಯನ ಕೇಂದ್ರ ಹಾಗೂ ಬಂಟಮಲೆ ಅಕಾಡೆಮಿ (ರಿ.) ಗುತ್ತಿಗಾರು ಸುಳ್ಯ ವತಿಯಿಂದ ರಾಜ್ಯದ ಹಿರಿಯ ಪತ್ರಕರ್ತ ಕಲ್ಲೇ ಶಿವೋತ್ತಮ ರಾವ್ ಬದುಕು ಮತ್ತು ಕೊಡುಗೆಗಳ ಕುರಿತ ‘ಜನಪ್ರಗತಿಯ ಪಂಜು’ ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಾಗೂ ‘ಕುವೆಂಪು ಬಂಟಮಲೆ ಪ್ರಶಸ್ತಿ’ ಪ್ರದಾನ ಸಮಾರಂಭ ಸಂಜೆ 4ಕ್ಕೆ ನಗರದ ಸಹೋದಯ ಸಭಾಂಗಣದಲ್ಲಿ ಜರಗಲಿದೆ.

ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಜನಪ್ರಗತಿಯ ಪಂಜು ಪುಸ್ತಕದ ಸಂಪಾದಕ ಪಾರ್ವತೀಶ ಬಿಳಿದಾಳೆ ‘ಕಲ್ಲೆ ಶಿವೋತ್ತಮ ರಾವ್ ಬದುಕು ಹಾಗೂ ಕೊಡುಗೆ’ ಬಗ್ಗೆ ಹಾಗೂ ‘ಬಂಟಮಲೆ ಅಕಾಡೆಮಿ ಪ್ರಶಸ್ತಿ’ ಕುರಿತು ನಾಟಕಕಾರ ಎ.ಕೆ. ಹಿಮಕರ ಉಪನ್ಯಾಸ ನೀಡಲಿದ್ದಾರೆ.

ಇದೇ ವೇಳೆ ಕಲ್ಲೆ ಶಿವೋತ್ತಮ ರಾವ್ ಅವರಿಗೆ ‘ಕುವೆಂಪು ಬಂಟಮಲೆ ಪ್ರಶಸ್ತಿ’ಯನ್ನು ಪುತ್ತೂರಿನ ಖ್ಯಾತ ಶಿಕ್ಷಣ ತಜ್ಞ ಡಾ. ಎನ್. ಸುಕುಮಾರ ಗೌಡ ಪ್ರದಾನ ಮಾಡಿ ಸನ್ಮಾನಿಸಲಿದ್ದಾರೆ. ಮಾಧ್ಯಮ ಮಿತ್ರರು ಆಗಮಿಸಬೇಕಾಗಿ ಈ ಮೂಲಕ ವಿನಂತಿಸುತ್ತಿದ್ದೇವೆ ಎಂದು ಎಂದು ಪ್ರಕಟಣೆ ತಿಳಿಸಿದೆ.

Join Whatsapp
Exit mobile version