Home ಟಾಪ್ ಸುದ್ದಿಗಳು ‘ಜಾನ್ಸನ್ ಆ್ಯಂಡ್ ಜಾನ್ಸನ್’ ಬೇಬಿ ಪೌಡರ್ ಉತ್ಪಾದನೆಗೆ ಅನುಮತಿ ನೀಡಿದ ಬಾಂಬೆ ಹೈಕೋರ್ಟ್

‘ಜಾನ್ಸನ್ ಆ್ಯಂಡ್ ಜಾನ್ಸನ್’ ಬೇಬಿ ಪೌಡರ್ ಉತ್ಪಾದನೆಗೆ ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಮುಂಬೈ: ‘ಜಾನ್ಸನ್ ಆ್ಯಂಡ್ ಜಾನ್ಸನ್’ ಬೇಬಿ ಪೌಡರ್ ಉತ್ಪಾದನೆಗೆ ಬಾಂಬೆ ಹೈಕೋರ್ಟ್ ಅನುಮತಿ ನೀಡಿದೆ.

ಕಂಪನಿಯು ತಾನೇ ಪೂರ್ಣ ಹೊಣೆ ಹೊತ್ತುಕೊಂಡು ಪೌಡರ್ ಉತ್ಪಾದನೆಯನ್ನು ಮತ್ತೆ ಆರಂಭಿಸಬಹುದು ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಆದರೆ ಉತ್ಪನ್ನದ ಮಾರಾಟ ಮತ್ತು ಹಂಚಿಕೆಗೆ ಈ ಹಿಂದೆಯೇ ಹೇರಲಾಗಿದ್ದ ನಿಷೇಧ ನ.30ರವರೆಗೆ ಮುಂದುವರಿಯಲಿದೆ.

ಹೊಸ ಪೌಡರ್ ಉತ್ಪಾದನೆಯಾದ ಮೂರು ದಿನಗಳೊಳಗೆ ಅದನ್ನು ಪರಿಶೀಲನೆ ನಡೆಸಿ ಒಂದು ವಾರದೊಳಗೆ ವರದಿ ನೀಡಬೇಕು ಎಂದು ನ್ಯಾಯಾಲಯ ಸೂಚಿಸಿದೆ.

‘ಜಾನ್ಸನ್ ಆ್ಯಂಡ್ ಜಾನ್ಸನ್’ ಬೇಬಿ ಪೌಡರ್ ಮಕ್ಕಳ ಆರೋಗ್ಯಕ್ಕೆ ಪೂರಕವಾಗಿಲ್ಲ ಎಂದು FDA (Food and Drug Administration) ಸಂಸ್ಥೆಯು ಪರವಾನಗಿ ರದ್ದು ಮಾಡಿ ಮಾರಾಟಕ್ಕೆ ನಿರ್ಬಂಧ ಹೇರಿತ್ತು.

Join Whatsapp
Exit mobile version