ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಬಿಜೆಪಿಗೆ ?

Prasthutha: March 6, 2021

ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬರಲು ಬಿಜೆಪಿ ಹರಸಾಹಸ ಪಡುತ್ತಿದೆ. ಹಲವಾರು ಗಣ್ಯರು ಮತ್ತು ತಾರೆಯರನ್ನು ಪಕ್ಷಕ್ಕೆ ಸೇರುವಂತೆ ಮಾಡಲು ಬಿಜೆಪಿ ತಂತ್ರ ಹೂಡುತ್ತಿದೆ. ಇತರೆ ಪಕ್ಷಗಳ ರಾಜಕೀಯ ಧುರೀಣರು ಪ್ರತಿದಿನ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಸುದ್ದಿಯಾಗುತ್ತಿದೆ. ಈ ಪಟ್ಟಿಯಲ್ಲಿ ಈಗ ಬಾಲಿವುಡ್ ನ ಪ್ರಖ್ಯಾತ ನಟ ಮಿಥುನ್ ಚಕ್ರವರ್ತಿಯವರ ಹೆಸರು ಕೇಳಿ ಬರುತ್ತಿದೆ ಮತ್ತು ಅವರು ಕೊಲ್ಕಾತಾದಲ್ಲಿ ನಡೆಯುವ ಪ್ರಧಾನಿ ಮೋದಿಯವರ ರಾಲಿಯಲ್ಲಿ ಬಿಜೆಪಿಯ ಸದಸ್ಯತ್ವ ಸ್ವೀಕರಿಸಲಿದ್ದಾರೆ ಎಂಬ ವದಂತಿಗಳು ಕೇಳಿ ಬರುತ್ತಿದೆ.

ವಾರದ ಹಿಂದೆಯಷ್ಟೇ ಬಿಜೆಪಿ ಪಕ್ಷದ ಸಿದ್ದಾಂತ ನಾಯಕ ಹಾಗೂ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮಿಥುನ್ ಚಕ್ರವರ್ತಿಯನ್ನು ಅವರ ಸ್ವಗೃಹದಲ್ಲಿ ಭೇಟಿಯಾಗಿದ್ದರು. ಆವಾಗಲೇ ಚಕ್ರವರ್ತಿ ಬಿಜೆಪಿ ಪಾಳಯಕ್ಕೆ ಸೇರುತ್ತಾರೆ ಎಂಬ ಸುಳಿವು ದೊರಕ್ಕಿತ್ತು. ಆದರೆ ನಟ ಮಾತ್ರ ಈ ಭೇಟಿಯಲ್ಲಿ ರಾಜಕೀಯವಿಲ್ಲ ಎಂದಿದ್ದರು.

70 ವರ್ಷದ ಮಿಥುನ್ ಚಕ್ರವರ್ತಿ ಬಿಜೆಪಿಗೆ ಎಂಬ ಬಲವಾದ ವದಂತಿ ಹರಡಿರುವುದರ ಮಧ್ಯೆ, ಸ್ವತಃ ಅವರು ಈ ವಿಷಯವನ್ನು ಅಲ್ಲಗಳೆದಿದ್ದಾರೆ. ಇದರ ನಡುವೆಯೂ ಕೊಲ್ಕತಾ ರಾಲಿಯಲ್ಲಿ ಪ್ರಧಾನಿ ಮೋದಿಯ ಸಮ್ಮುಖದಲ್ಲಿ ಚಕ್ರವರ್ತಿ ಬಿಜೆಪಿಯ ಸದಸ್ಯತನ ಸ್ವೀಕರಿಸುತ್ತಾರೆ ಎಂಬ ಸುದ್ದಿಗಳು ಬಂಗಳದಾದ್ಯಂತ ಹರಡಿದೆ. ಜೊತೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ಕೂಡಾ ಮಿಥುನ್ ಚಕ್ರವರ್ತಿಯವರನ್ನು ನಾವು ಸ್ವಾಗತಿಸುತ್ತೇವೆ ಎಂದು ಹೇಳಿರುವುದು ಕೂಡಾ ಈ ಸುದ್ದಿಗೆ ರೆಕ್ಕೆ ಪುಕ್ಕ ಬಂದಂತಾಗಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!